Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ: ಅಕಾಲಿ, ಕಾಂಗ್ರೆಸ್, ಬಿಜೆಪಿ ನಾಯಕರ ಬಂಧನ

ಡ್ರಗ್ ಮಾಫಿಯಾ: ಅಕಾಲಿ, ಕಾಂಗ್ರೆಸ್, ಬಿಜೆಪಿ ನಾಯಕರ ಬಂಧನ
ಚಂದೀಘಡ್ , ಶುಕ್ರವಾರ, 3 ಜುಲೈ 2015 (15:03 IST)
ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಪಂಜಾಬ್‌ನಲ್ಲಿ  ಕಾಂಗ್ರೆಸ್, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಡಳಿತಾರೂಢ ಅಕಾಲಿದಳ ನಾಯಕರು ಮತ್ತು ಇತರ ಹಲವರನ್ನು ಬಂಧಿಸಲಾಗಿದೆ. 

ಜುಲೈ 1 ರಂದು ಪೊಲೀಸರು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಅವರಿಂದ 1.2 ಕೆಜಿಯಷ್ಟು ಹೆರಾಯಿನ್‌ನ್ನು ಜಫ್ತಿ ಮಾಡಿಕೊಳ್ಳಲಾಗಿತ್ತು. 
 
ಮತ್ತೊಂದು ಘಟನೆಯಲ್ಲಿ  ಅಕಾಲಿ ದಳದ ಮುಖಂಡ ಮಹಲ್ ಸಿಂಗ್ ರಾಣಾರನ್ನು ಜೂನ್ 29 ರಂದು ರಾಜಸ್ಥಾನ್ ಪೊಲೀಸರು ಬಂಧಿಸಿದ್ದು ಅವರಿಂದ 7.5 ಕೆಜಿಯಷ್ಟು ಆಫೀಮನ್ನು ವಶಪಡಿಸಿಕೊಳ್ಳಲಾಗಿತ್ತು. 
 
ಆಫೀಮು ಸಂಗ್ರಹ ಮತ್ತು ಅಕ್ರಮ ಸಾಗಾಟದ ಆರೋಪದ ಮೇಲೆ ಬಿಜೆಪಿ ನಾಯಕ ವಿಜಯ್ ಕುಮಾರ್ ಕಾಂಭೋಜ್ ಅವರನ್ನು ಕೂಡ ರಾಜಸ್ಥಾನ್ ಪೊಲೀಸರು ಬಂಧಿಸಿದ್ದರು. ಅವರಿಂದ 7.5 ಕೆಜಿಯಷ್ಟು ಆಫೀಮನ್ನು ಪೊಲೀಸರು ಜಫ್ತಿ ಮಾಡಿದ್ದರು.
 
ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಸಿಂಗ್ ಕೂಡ ಮಜಿಥಿಯ ಮೇಲೆ ಕೂಡ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದ್ದು , ಪೊಲೀಸರು ಬಂಧಿಸಿರುವ ಕುಖ್ಯಾತ ಡ್ರಗ್ ಕಿಂಗ್‌ಪಿನ್ ಅವರ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದಿದ್ದಾರೆ. 
 
ಈ ಡ್ರಗ್ ಮಾಫಿಯಾ ಪ್ರಕರಣ ಬೆಳಕಿಗೆ ಬಂದಾಗಿನಿಂದ  ವಿರೋಧ ಪಕ್ಷಗಳು ಆಡಳಿತಾರೂಢ ಅಕಾಲಿ ದಳದ ಮೇಲೆ ಕೆಂಡ ಕಾರುತ್ತಿವೆ. 

Share this Story:

Follow Webdunia kannada