Select Your Language

Notifications

webdunia
webdunia
webdunia
webdunia

ಕೊನೆಯಾಸೆ: ಐಸಿಯುವಿನಲ್ಲೇ ಮಗನ ಮದುವೆ ನಡೆಸಿ ಕಣ್ಮುಚ್ಚಿದ

ಕೊನೆಯಾಸೆ: ಐಸಿಯುವಿನಲ್ಲೇ ಮಗನ ಮದುವೆ ನಡೆಸಿ ಕಣ್ಮುಚ್ಚಿದ
ಪುಣೆ , ಗುರುವಾರ, 22 ಡಿಸೆಂಬರ್ 2016 (11:56 IST)
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ತಂದೆಯ ಕೊನೆಯಾಸೆಯಂತೆ ಯುವಕನೋರ್ವ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಮದುವೆಯಾದ ಅಸಾಮಾನ್ಯ ಘಟನೆ ಪುಣೆಯಲ್ಲಿ ನಡೆದಿದೆ.
ಉದ್ಯಮಿಯಾಗಿರುವ ದ್ಯಾನೇಶ್ (34) ಮದುವೆ ತಂದೆ ನಂದಕುಮಾರ್ ದೇವ್ (67) ಬಯಕೆಯಂತೆ  ಡಿಸೆಂಬರ್ 18ರಂದು ಸತಾರಾದಲ್ಲಿ ನಿಶ್ಚಯವಾಗಿತ್ತು. ಆದರೆ ಮದುವೆಗೆ ಎರಡು ದಿನಗಳ ಮುನ್ನ ನಂದಕುಮಾರ್ ದೇವ್ ಅವರಿಗೆ ಹೃದಯಾಘಾತವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರ ಕೊನೆಯಾಸೆ ಮಗನ ಮದುವೆ ನೋಡುವುದಾಗಿತ್ತು.
 
ಹೀಗಾಗಿ ನಂದಕುಮಾರ್ ಪತ್ನಿ ರಜನಿ, ಮಗಳು ಮುಕ್ತಾ ಮತ್ತು ವಧುವಿನ ಕಡೆಯವರು ಮಾತುಕತೆ ನಡೆಸಿ ಅವರು ದಾಖಲಾಗಿದ್ದ ಆಸ್ಪತ್ರೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ವೈದ್ಯರ ಸಮ್ಮತಿ ಪಡೆದು ನಿಶ್ಚಿತವಾಗಿದ್ದ ದಿನಕ್ಕಿಂತ ಒಂದು ದಿನ ಮೊದಲು ಅಂದರೆ ಡಿಸೆಂಬರ್ 17ರ ಸಂಜೆ ವರ- ವಧು ಹಾರ ಬದಲಾಯಿಸಿಕೊಂಡರು. 
 
ವಿಪರ್ಯಾಸವೆಂದರೆ ಮದುವೆಯಾದ 12 ಗಂಟೆಗಳ ಬಳಿಕ ನಂದಕುಮಾರ್ ನೆಮ್ಮದಿಯಿಂದ ಪ್ರಾಣ ಬಿಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಡಿಯೋ: ಹೆಬ್ಬಾವು ಬಾವಲಿಯ ಕಾಳಗ ನೋಡಿ ದಂಗಾದ ಪ್ರವಾಸಿಗರು!