Select Your Language

Notifications

webdunia
webdunia
webdunia
webdunia

ಪುಣೆ: ಭೂಕುಸಿತ 15ಕ್ಕೂ ಹೆಚ್ಚು ಸಾವು, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ

ಪುಣೆ:  ಭೂಕುಸಿತ 15ಕ್ಕೂ ಹೆಚ್ಚು ಸಾವು, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ
ಪುಣೆ , ಬುಧವಾರ, 30 ಜುಲೈ 2014 (13:36 IST)
ಪುಣೆ ಜಿಲ್ಲೆಯ ಅಂಬೆಗಾಂವ್ ತಾಲೂಕಿನ ಮಲಿನ್ ಗ್ರಾಮದಲ್ಲಿ ಉಂಟಾದ ಭೂ ಕುಸಿತದಲ್ಲಿ 15 ಮಂದಿ ಸಾವನ್ನಪ್ಪಿದ್ದು 150 ಕ್ಕೂ ಹೆಚ್ಚು ಜನ ಭಗ್ನಾವಶೇಷರಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಇಂದು ಸುರಿದ ಭಾರಿ ಮಳೆಯಿಂದಾಗಿ ಮಲಿನ್ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಮನೆಗಳು ಭೂಕುಸಿತಕ್ಕೆ ಸಿಲುಕಿವೆ ಗ್ರಾಮದಲ್ಲಿ ಸುಮಾರು 750 ಮನೆಗಳಿದ್ದು, ಜನತೆ ಆಂತಕದ ಕ್ಷಣಗಳನ್ನು ಎದುರಿಸುತ್ತಾರೆ ಎಂದು ವರದಿಗಳು ಬಹಿರಂಗಪಡಿಸಿವೆ. 
 
ಅಂಬೆಗಾಂವ್ ತಾಲೂಕಿನ ಮಲಿನ್ ಗ್ರಾಮ ಭೀಮಾಶಂಕರ್ ಜ್ಯೋತೀರ್ಲಿಂಗ್ ದೇವಾಲಯದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಪುಣೆ ನಗರದಿಂದ 70 ಕಿ.ಮೀ ದೂರದಲ್ಲಿದೆ. 
 
ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. 100 ಮಂದಿ ರಾಷ್ಟ್ರೀಯ ಪ್ರವಾಹ ವಿಕೋಪ ತಡೆ ದಳದ ಸದಸ್ಯರು ನೆಲದಲ್ಲಿ ಹೂತುಹೋದ ಜನರ ಪ್ರಾಣ ರಕ್ಷಣೆಗಾಗಿ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ. 
 
ಏತನ್ಮದ್ಯೆ, ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
 

Share this Story:

Follow Webdunia kannada