Select Your Language

Notifications

webdunia
webdunia
webdunia
webdunia

ಪುಣೆಯ ಚಿನ್ನದ ಶರ್ಟಿನ ವ್ಯಕ್ತಿ ದತ್ತಾತ್ರೇಯ ಫುಗೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಪುಣೆಯ ಚಿನ್ನದ ಶರ್ಟಿನ ವ್ಯಕ್ತಿ ದತ್ತಾತ್ರೇಯ ಫುಗೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ
ಪುಣೆ , ಶುಕ್ರವಾರ, 15 ಜುಲೈ 2016 (18:46 IST)
1.27 ಕೋಟಿ ರೂಪಾಯಿಗಳ ಚಿನ್ನದ ಶರ್ಟ್ ಧರಿಸಿ ಹೆಡ್‌ಲೈನ್ ಸುದ್ದಿಯಾಗಿದ್ದ ದತ್ತಾತ್ರೇಯ ಫುಗೆಯವರನ್ನು ಕೆಲ ಆರೋಪಿಗಳು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ, ಫುಗೆ ನಡೆಸುತ್ತಿದ್ದ ಹಣಕಾಸಿನ ವ್ಯವಹಾರವೇ ಹತ್ಯೆಗೆ ಕಾರಣವಾಗಿರಬಹುದು. ಫುಗೆ ಪತ್ನಿ ಸೀಮಾ ಪಿಂಪ್ರಿ ಚಿಂಚವಾಡಾ ಮುನ್ಸಿಪಲ್ ಕಾರ್ಪೋರೇಶನ್‌ನ ಮಾಜಿ ಕೌನ್ಸಿಲರ್ ಆಗಿದ್ದರು ಪೊಲೀಸ್ ಮೂಲಗಳು ತಿಳಿಸಿವೆ.
 
ಕೆಲ ವ್ಯಕ್ತಿಗಳು ತಡರಾತ್ರಿ ಮನೆಗೆ ಬಂದು ಪತಿ ದತ್ತಾತ್ರೇಯ ಫುಗೆಯನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಆತನ ಮೃತ ದೇಹ  ಡಿಘಿಯ ಭಾರತ್ ಮಾತಾನಗರ ಪ್ರದೇಶದಲ್ಲಿ ಪತ್ತೆಯಾಗಿದೆ. ಫುಗೆ ಮೇಲೆ ಕಲ್ಲಿನಿಂದ ಜಜ್ಜಿದ ಮತ್ತು ಇತರ ಚೂಪಾದ ಆಯುಧಗಳಿಂದ ತಿವಿದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
 
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಉದಯೋನ್ಮುಖ ರಾಜಕಾರಣಿಯಾಗಿದ್ದ ಫುಗೆ, 22 ಕ್ಯಾರೆಟ್ ಶರ್ಟ್ ಧರಿಸಿ ದೇಶಾದ್ಯಂತ ಸುದ್ದಿಯಾಗಿದ್ದರು. ಜನರನ್ನು ಆಕರ್ಷಿಸಲು ಚಿನ್ನದ ಶರ್ಟ್ ಧರಿಸುತ್ತಿದುದಾಗಿ ಹೇಳುತ್ತಿದ್ದರು ಎಂದು ದತ್ತಾತ್ರೇಯ ಫುಗೆ ಪತ್ನಿ ಸೀಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿಯೇ ಮಧ್ಯಪ್ರದೇಶ ಹ್ಯಾಪಿನೆಸ್ ಡಿಪಾರ್ಟ್‌ಮೆಂಟ್ ಹೊಂದಿರುವ ಮೊದಲ ರಾಜ್ಯ