Select Your Language

Notifications

webdunia
webdunia
webdunia
webdunia

ರೋಹಿತ್ ವೆಮುಲ ಪುಣ್ಯತಿಥಿ; ವಿವಿ ಅಂಗಳದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ

ರೋಹಿತ್ ವೆಮುಲ ಪುಣ್ಯತಿಥಿ; ವಿವಿ ಅಂಗಳದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ
ಹೈದರಾಬಾದ್ , ಬುಧವಾರ, 18 ಜನವರಿ 2017 (07:44 IST)
ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಯಹತ್ಯೆ ಮಾಡಿಕೊಂಡು ಒಂದು ವರ್ಷವಾದರೂ ಇಲ್ಲಿಯವರೆಗೂ ನ್ಯಾಯ ದೊರಕಿಲ್ಲ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು ವೆಮುಲ ತಾಯಿಗೆ ಪ್ರತಿಭಟನಾ ಸ್ಥಳಕ್ಕೆ ಬರಲು ತಡೆ ಒಡ್ಡಿದಾಗ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತಳ್ಳಾಟ ನೂಕಾಟ ಕೂಡ ನಡೆದಿದೆ. ಪರಿಸ್ಥಿತಿ ಕೈ ಮೀರಿದನ್ನನ್ನು ಅರಿತ ಪೊಲೀಸರು ಕೆಲ ವಿದ್ಯಾರ್ಥಿಗಳನ್ನು ಬಂಧಿಸಿದರು. 
 
ರೋಹಿತ್ ತಾಯಿ ರಾಧಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದರಿಂದ ಇಂದು ಕೂಡ ಪ್ರತಿಭಟನೆ ಮುಂದುವರೆಯುವ ಸಾಧ್ಯತೆಗಳಿವೆ. ಹೀಗಾಗಿ ವಿಶ್ವವಿದ್ಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.  
 
ನಿನ್ನೆ ರೋಹಿತ್ ಪುಣ್ಯಸ್ಮರಣೆ ಮಾಡಿದ ವಿದ್ಯಾರ್ಥಿಗಳು ಆತನ ಭಾವಚಿತ್ರದ ಮುಂದೆ ಮೇಣದಬತ್ತಿ ಬೆಳಗಿ ಗೌರವ ಸಲ್ಲಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಯುವತಿಯಿಂದ ಆ್ಯಸಿಡ್ ದಾಳಿ