Webdunia - Bharat's app for daily news and videos

Install App

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ವಿರುದ್ಧ ಪ್ರತಿಭಟನೆ

Webdunia
ಗುರುವಾರ, 6 ಅಕ್ಟೋಬರ್ 2016 (12:12 IST)
ಪಾಕಿಸ್ತಾನದ ಸರ್ಕಾರಕ್ಕೆ ಅಲ್ಲಿನ ಜನರ ಅಭಿವೃದ್ಧಿ, ನೆಮ್ಮದಿಯ ಚಿಂತೆ ಇಲ್ಲ. ಅದಕ್ಕೆ ತಲೆಕೆಡಿಸಿಕೊಂಡಿಯೂ ಇಲ್ಲ ಅದು. ಬದಲಾಗಿ ಅದರ ಗುರಿ ನಮ್ಮ ನೆಲವನ್ನು ಅತಿಕ್ರಮಿಸುವುದು. ಕಾಶ್ಮೀರಿಗಳು ತಮ್ಮ ಪರವಾಗಿದ್ದಾರೆ ಎಂಬುದು ಪಾಕ್ ಅಂಬೋಣ. ಆದರೆ ಅದು ಈಗಾಗಲೇ ನಮ್ಮಿಂದ ವಶಪಡಿಸಿಕೊಂಡಿರುವ ಪಿಓಕೆ ಜನರ ವಿಶ್ವಾಸಾರ್ಹತೆಯನ್ನು ಸಹ ಗಳಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ಅಲ್ಲಿನ ಜನರು ಪಾಕಿಸ್ತಾನದ ದೌರ್ಜನ್ಯದಿಂದ ಬೇಸತ್ತು ಹೋಗಿದ್ದು ಈಗ ಅದೇ ದೇಶದ ವಿರುದ್ಧ ಸಿಡಿದು ನಿಂತಿದ್ದಾರೆ. 
ಪಿಓಕೆಯಲ್ಲಿನ ಸ್ಥಳೀಯರು ಪಾಕ್ ವಿರುದ್ಧ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಪಿಓಕೆ ಪ್ರಾಂತ್ಯದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ಮುಝಪ್ಪರಾಬಾದ್, ನೀಲಮ್ ಘಾಟಿ, ಕೋಟಲಿ, ಮೀರ್ ಪುರ್, ಗಿಲ್ ಗಿಟ್, ಚಿನಾರಿ ಸೇರಿದಂತೆ ಹಲವೆಡೆ ಧರಣಿಗಳು ನಡೆಯುತ್ತಿವೆ. 
 
ಪಾಕ್ ಗುಪ್ತಚರ ಇಲಾಖೆ ಐಎಸ್ಐ ತಮ್ಮ ಪ್ರದೇಶವನ್ನು ಸಮಾಜಘಾತುಕ ಶಕ್ತಿ, ಭಯೋತ್ಪಾದಕರ ಸ್ವರ್ಗವಾಗಿಸಿದೆ, ನಮ್ಮ ಬದುಕು ನರಕಮಯವಾಗಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದ ಶಿಬಿರಗಳಲ್ಲಿ ತರಬೇತಿ ನಿರತರು ನಮ್ಮ ಹಳ್ಳಿಗಳನ್ನು ಲೂಟಿ ಮಾಡುತ್ತಾರೆ. ನಮ್ಮ ಪ್ರದೇಶವನ್ನು ಉಗ್ರ ತರಬೇತಿಗೆ ಮತ್ತು ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸಲು ಬಳಸಲಾಗುತ್ತಿದೆ. ತಕ್ಷಣಕ್ಕೆ ಇದಕ್ಕೆ ಅಂತ್ಯ ಹಾಡಿ, ಇಲ್ಲದಿದ್ದರೆ ಪರಿಣಾಮವನ್ನೆದುರಿಸಿ ಎಂದು ಸ್ಥಳೀಯರು, ಪಾಕ್ ಆಕ್ರಮಿತ ಕಾಶ್ಮೀರದ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಾಕಷ್ಟು ಜನರು ಭಾರತದ ಒಲವನ್ನು ಹೊಂದಿದ್ದಾರೆ. ಈ ಪ್ರದೇಶ ಹಿಂದುಳಿದಿರಲು ಪಾಕ್ ಸರ್ಕಾರವೇ ಕಾರಣವಾಗಿದೆ. ಅಲ್ಲದೇ ಅಲ್ಲಿನ ಜನರು ಪಾಕಿಸ್ತಾನ ಸರ್ಕಾರ , ಪಾಕ್ ಸೈನಿಕರಿಂದ ಉಗ್ರರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ಜನ ಈಗ ಬೀದಿಗಿಳಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments