Select Your Language

Notifications

webdunia
webdunia
webdunia
webdunia

ಪ್ರಿನ್ಸಿಪಾಲ್, ಶಿಕ್ಷಕರಿಂದ ಶಿಕ್ಷಕಿ ಪುತ್ರಿ ಮೇಲೆ ಗ್ಯಾಂಗ್ ರೇಪ್

ಪ್ರಿನ್ಸಿಪಾಲ್, ಶಿಕ್ಷಕರಿಂದ ಶಿಕ್ಷಕಿ ಪುತ್ರಿ ಮೇಲೆ ಗ್ಯಾಂಗ್ ರೇಪ್
ಪಾಟ್ಣಾ , ಮಂಗಳವಾರ, 17 ಜನವರಿ 2017 (10:04 IST)
ಶಾಲೆಯೊಂದರ ಪ್ರಾಚಾರ್ಯ ಮತ್ತು ಮೂವರು ಶಿಕ್ಷಕರು ಸೇರಿ 12 ವರ್ಷದ ಬುದ್ಧಿ ಮಾಂದ್ಯ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದೇಶವೇ ತಲೆತಗ್ಗಿಸುವಂತಹ ಘಟನೆ ಬಿಹಾರಿನ ಜೆಹಾನಾಬಾದ್ ಜಿಲ್ಲೆಯಲ್ಲಿ ನಡೆದಿದೆ. 

ಬಾಲಕಿ  ಕಾಕೋನಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಓದುತ್ತಿದ್ದಳು. ಭಾನುವಾರ ಮಧ್ಯಾಹ್ನ ಶಾಲೆಯ ಟೆರೇಸ್‌ನಲ್ಲಿ ಒಬ್ಬರಾದ ಮೇಲೊಬ್ಬರಂತೆ ನಾಲ್ಕು ಜನ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. 
 
ಶಾಲೆಗೆ ರಜಾ ಇದ್ದರೂ ಮುಖ್ಯಶಿಕ್ಷಕನ ಆದೇಶದಂತೆ ಅಂದು ಶಾಲೆಯನ್ನು ತೆರೆದಿಡಲಾಗಿತ್ತು ಎಂದು ತಿಳಿದುಬಂದಿದೆ. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಬಾಲಕಿಯ ತಾಯಿ ತನ್ನ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನಾ ನೋಡಿದಾಗ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. 
 
ಪೀಡಿತಳ ತಾಯಿ ಈಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಮುಖ್ಯ ಶಿಕ್ಷಕ ಅಜ್ಜು ಅಹಮದ್ ಮತ್ತು ಇತರ ಆರೋಪಿಗಳಾದ ರೆಹಮಾನ್, ಅಬ್ದುಲ್ ಬರಿ, ಮೊಹಮ್ಮದ್ ಶಕೌತ್ ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 
 
ವೈಶಾಲಿಯಲ್ಲಿನ ಶಾಲೆಯೊಂದರಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಗೈದ ಒಂದು ವಾರದೊಳಗೆ ಮತ್ತೆ ಅದೇ ರೀತಿಯ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಮ್ಮನಿಗೆ ದೀಪಾ ಸವಾಲ್; ಎಐಡಿಎಂಕೆಗೆ ಅಧಿಕೃತ ಸೇರ್ಪಡೆ