Webdunia - Bharat's app for daily news and videos

Install App

ಮೆಟ್ರೋ ಪ್ರಯಾಣ ಆನಂದಿಸಿದ ಮೋದಿ

Webdunia
ಶನಿವಾರ, 25 ಏಪ್ರಿಲ್ 2015 (12:07 IST)
ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಆಶ್ಚರ್ಯ ಮೂಡಿಸಿದರು. ದಕ್ಷಿಣ ದೆಹಲಿಯ ದೌಲಾಕೌನ್‌ ರೈಲ್ವೆ ನಿಲ್ದಾಣದಿಂದ ತಮ್ಮ ಪ್ರಯಾಣನ್ನು ಆರಂಭಿಸಿದ ಮೋದಿಯವರು ನೈಋತ್ಯ ದೆಹಲಿಯ ದ್ವಾರಕಾ ಸೆಕ್ಟರ್ 21 ನಿಲ್ದಾಣದಲ್ಲಿ ಇಳಿದರು.

ರಾಷ್ಟ್ರೀಯ ಗುಪ್ತಚರ ಅಕಾಡೆಮಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದ್ವಾರಕಾಗೆ ತೆರಳುತ್ತಿದ್ದ ಮೋದಿಯವರು ತಮಗೆ ನೀಡಲಾಗುವ ಭದ್ರತಾ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಮೆಟ್ರೋದಲ್ಲಿ ಪ್ರಯಾಣಿಸಿದರು.
 
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಸಂದರ್ಭದಲ್ಲಿ ಪ್ರಧಾನಿಗೆ ಸಾಥ್ ನೀಡಿದರು.
 
‘ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಂತೆ ಶ್ರೀಧರನ್ ಅವರು ಅನೇಕ ಸಲ ಹೇಳಿದ್ದರು. ಇಂದು ದ್ವಾರಕಾಗೆ ತೆರಳಬೇಕಾಗಿದ್ದರಿಂದ ಅಂತಹ ಅವಕಾಶ ಸಿಕ್ಕಿತು. ಇದು ನನಗೆ ತುಂಬ ಆಹ್ಲಾದಕರ ಅನುಭವವನ್ನು ನೀಡಿತು, ದೆಹಲಿ ಮೆಟ್ರೋ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳು’ ಎಂದು ಪ್ರಯಾಣದ ಬಳಿಕ ಮೋದಿ ಟ್ವೀಟ್ ಮಾಡಿದ್ದಾರೆ.
 
ದೆಹಲಿ ಮೆಟ್ರೋ ರೈಲು ನಿಗಮದ ಮಾಜಿ ಮುಖ್ಯಸ್ಥರಾಗಿರುವ  ಶ್ರೀಧರನ್ 'ಮೆಟ್ರೋ ಮ್ಯಾನ್' ಎಂದೇ ಗುರುತಿಸಲ್ಪಡುತ್ತಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments