Select Your Language

Notifications

webdunia
webdunia
webdunia
webdunia

ಮೋದಿ ಪ್ರಯತ್ನದ ಫಲ: ತಾಲಿಬಾನಿಗಳ ಮುಷ್ಠಿಯಿಂದ ಪಾರಾದ ಕ್ರೈಸ್ತ ಪಾದ್ರಿ

ಮೋದಿ ಪ್ರಯತ್ನದ ಫಲ: ತಾಲಿಬಾನಿಗಳ ಮುಷ್ಠಿಯಿಂದ ಪಾರಾದ ಕ್ರೈಸ್ತ ಪಾದ್ರಿ
ನವದೆಹಲಿ , ಸೋಮವಾರ, 23 ಫೆಬ್ರವರಿ 2015 (17:10 IST)
ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಅಪಹರಣಕ್ಕೊಳಗಾಗಿ  9 ತಿಂಗಳ ನಂತರ ಅವರ ಕಪಿಮುಷ್ಠಿಯಿಂದ ವಾಪಸಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವೇ ಕಾರಣ ಎಂದು ಫಾದರ್ ಅಲೆಕ್ಸಿ ಪ್ರೇಮ್ ಕುಮಾರ್ ಹೇಳಿದ್ದಾರೆ. ಅವರಿಂದಾಗಿ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು. ಅವರು ನನ್ನ ಜೀವ ಕಾಪಾಡಿದರು. ಕಾಬೂಲ್ ಏರ್‌ಪೋರ್ಟ್‌ನಲ್ಲಿದ್ದಾಗ  ಅವರು ಕರೆ ಮಾಡಿದ್ದರು.

ನನ್ನನ್ನು ಉಳಿಸಲು ಬಹಳಷ್ಟು ಆಸಕ್ತಿಯನ್ನು ಅವರು ತೋರಿದರು ಎಂದು ದೆಹಲಿ ಏರ್ಪೋರ್ಟ್‌ಗೆ ಬಂದಿಳಿದ ಕುಮಾರ್ ಹೇಳಿದರು. ಇದಕ್ಕೆ ಮುಂಚೆ ತಮಿಳುನಾಡಿನ ಕ್ರೈಸ್ತ ಪಾದ್ರಿ ಫಾದರ್ ಅಲೆಕ್ಸಿಪ್ರೇಮ್ ಕುಮಾರ್ ತಾಲಿಬಾನ್ ಹಿಡಿತದಿಂದ ಬಿಡುಗಡೆಯಾಗುತ್ತಿರುವ ಬಗ್ಗೆ ಸಂತಸವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದರು.

ಕಳೆದ ವರ್ಷ ಜೂನ್ 2ರಂದು ಪಶ್ಚಿಮ ಆಫ್ಘಾನಿಸ್ತಾನದ ಹೇರಾತ್ ಪ್ರಾಂತ್ಯದಲ್ಲಿ ಪ್ರೇಮ್ ಕುಮಾರ್ ಅವರನ್ನು ಅಪಹರಿಸಲಾಗಿತ್ತು.ಪ್ರೇಮ್ ಕುಮಾರ್ ಅಪಹರಣವಾದಾಗ ಅವರು  ಅಂತಾರಾಷ್ಟ್ರೀಯ ಎನ್‌ಜಿಒ ಕ್ರೈಸ್ತ ನಿರಾಶ್ರಿತ ಸೇವೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಫ್ಘಾನಿಸ್ತಾನದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರು.  ಹೇರಾತ್ ನಗರಕ್ಕೆ 25 ಕಿಮೀ ದೂರದ ಸೊಹಾದತ್ ಗ್ರಾಮದಲ್ಲಿ ಶಿಕ್ಷಕರ ಜೊತೆ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ ತಾಲಿಬಾನ್ ಉಗ್ರರು ಅವರನ್ನು ಅಪಹರಿಸಿದ್ದರು. 

Share this Story:

Follow Webdunia kannada