Webdunia - Bharat's app for daily news and videos

Install App

ಪ್ರಧಾನಿ ಮೋದಿಗೆ ಮತ್ತೆ ಟಾಂಗ್ ನೀಡಿದ ನಟ ಪ್ರಕಾಶ್ ರಾಜ್

Webdunia
ಗುರುವಾರ, 19 ಮೇ 2022 (22:14 IST)
ಖ್ಯಾತ ಬಹುಭಾಷಾ ನಟ, ರಾಜಕಾರಣಿ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕ ಪ್ರಕಾಶ್​ ರಾಜ್ ಅವರು ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಹೊಸ ವೇಷ ಧರಿಸಿರುವ ಫೋಟೋವನ್ನು ಪೋಸ್ಟ್​ ಮಾಡಿ ಟ್ವೀಟ್​ ಮೂಲಕ ಪ್ರಧಾನಿ ಮೋದಿಯನ್ನು ಅಣಕಿಸಿದ್ದಾರೆ.ಸ್ಥಳೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಎರಡು ಫೋಟೋಗಳನ್ನು ಟ್ವಿಟರ್​ನಲ್ಲಿ ಪ್ರಕಾಶ್​ ರಾಜ್​ ಅವರು ಅಪ್​ಲೋಡ್​ ಮಾಡಿದ್ದಾರೆ.
ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋ ಕುರಿತು 'ನಮ್ಮ ಸುಪ್ರೀಂ ಲೀಡರ್​ನಿಂದ ಸ್ಫೂರ್ತಿಗೊಂಡು ಇದನ್ನು ಧರಿಸಿದ್ದೇನೆ…ಹಾಯ್​ ಗಯ್ಸ್​ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು' ಎಂದು ಟ್ವೀಟ್​ ಮಾಡಿದ್ದಾರೆ.
ಇಲ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.ಪ್ರಕಾಶ್​ ಅವರು ಧರಿಸಿರುವುದು ನೇಪಾಳಿ ಶೈಲಿಯ ಉಡುಪಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿದ್ದನ್ನು ಅಣುಕಿಸುವ ಸಲುವಾಗಿ ಪ್ರಕಾಶ್​ ರಾಜ್​ ಈ ಟ್ವೀಟ್​ ಮಾಡಿರಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌

BRICSನ ಕಳೆದ ಮೂರು ಸಭೆಗಳಿಂದ ಫಲಿತಾಂಶ ಕಂಡಿಲ್ಲ: ಚಿದಂಬರಂ ಅಸಮಾಧಾನ

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಕಾಲ್ನಡಿಗೆ ಯಶಸ್ವಿ: ವಿಜಯೇಂದ್ರ

ಮುಂದಿನ ಸುದ್ದಿ
Show comments