ಪರೀಕ್ಷೆ ಮುಂದೂಡಲು ಮಗುವನ್ನೇ ಕೊಂದ ಪಿಯು ವಿದ್ಯಾರ್ಥಿ…?!

Webdunia
ಬುಧವಾರ, 8 ನವೆಂಬರ್ 2017 (15:13 IST)
ನವದೆಹಲಿ: ಗುರುಗ್ರಾಂ ರ್ಯಾನ್ ಇಂಟರ್‌‌ ನ್ಯಾಷನಲ್ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪಿಯು ವಿದ್ಯಾರ್ಥಿ ಪರೀಕ್ಷೆ ಹಾಗೂ ಪೋಷಕರ ಸಭೆ ಮುಂದೂಡಲು ಬಾಲಕನ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ಸಿಬಿಐ ಹೇಳಿದೆ. 2 ನೇ ತರಗತಿ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಈ ಮೊದಲು ಬಸ್ ಕಂಡಕ್ಟರ್‌ ನನ್ನು ಬಂಧಿಸಲಾಗಿತ್ತು. ಆದರೆ ಕಂಡಕ್ಟರ್ ಈ ಕೊಲೆ ಮಾಡಿಲ್ಲ. 11ನೇ ತರಗತಿ ವಿದ್ಯಾರ್ಥಿ ಪರೀಕ್ಷೆ ಮುಂದೂಡಲು ಈ ಕೃತ್ಯವೆಸಗಿದ್ದಾನೆ ಎಂದು ಸಿಬಿಐ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ಬಂಧಿತ ವಿದ್ಯಾರ್ಥಿ ಶಾಲೆಗೆ ತನ್ನೊಟ್ಟಿಗೆ ಚಾಕು ತೆಗೆದುಕೊಂಡು ಬರುತ್ತಿದ್ದ. ಕೆಲವೊಮ್ಮೆ ಈತನಿಗೆ ಮಾನಸಿಕ ಚಿಕಿತ್ಸೆಯೂ ಕೊಡಿಸಲಾಗಿದೆ. ತಾನು ತಂದಿದ್ದ ಚಾಕುವಿನಿಂದಲೇ ಬಾಲಕನ ಕತ್ತು ಸೀಳಿ ಶಾಲೆಯ ಬಾತ್‌ ರೂಂನಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಕೊಲೆಗೆ ಬಳಿಸಿರುವ ಚಾಕುವನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ ಸೆ.8ರಂದು 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಶವ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಆರ್ ಎಸ್ಎಸ್ ಹೀಗೆ ಬೆದರಿಕೆ ಹಾಕುತ್ತದೆ ಎಂದು ಅಡಿಯೋ ಬಾಂಬ್ ಹಾಕಿದ ಪ್ರಿಯಾಂಕ್ ಖರ್ಗೆ

ರಸ್ತೆ ಸರಿ ಮಾಡಿ ಎಂದರೆ ಉದ್ಯಮಿಗಳಿಗೇ ಬೆದರಿಸುವ ಕಾಂಗ್ರೆಸ್ ಸರ್ಕಾರ: ಸಿಟಿ ರವಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ರಸ್ತೆಗೆ ಡಾಂಬರು ಹಾಕ್ತಿದ್ದೀವಿ ನೋಡ್ಕೊಳ್ಳಿ ಎಂದ ಡಿಕೆ ಶಿವಕುಮಾರ್

ಸಿಎಂ ಆಗಬೇಕೆಂದುಕೊಂಡಿರುವ ಡಿಕೆ ಶಿವಕುಮಾರ್ ಗೆ ಹಾಸನಾಂಬೆ ಕೊಟ್ಟ ಸೂಚನೆ ಏನು

ಮುಂದಿನ ಸುದ್ದಿ
Show comments