Select Your Language

Notifications

webdunia
webdunia
webdunia
webdunia

ಟೋಮೆಟೋ ತಿನ್ನುವುದು ಶ್ರೀಮಂತರು ಮತ್ತು ಕೆಂಪು ಕೆನ್ನೆಯವರು ಮಾತ್ರ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ

ಟೋಮೆಟೋ ತಿನ್ನುವುದು ಶ್ರೀಮಂತರು ಮತ್ತು ಕೆಂಪು ಕೆನ್ನೆಯವರು ಮಾತ್ರ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
ನವದೆಹಲಿ , ಬುಧವಾರ, 30 ಜುಲೈ 2014 (11:40 IST)
ಇಡೀ ದೇಶದ ಸಾಮಾನ್ಯ ನಾಗರಿಕರು ತರಕಾರಿಗಳ ಬೆಲೆ ವಿಶೇಷವಾಗಿ ದಿನಬಳಕೆಯ ಟೊಮೆಟೋ ಮತ್ತು ಈರುಳ್ಳಿಯ ಬೆಲೆ ಗಗನಕ್ಕೇರಿರುವುದರಿಂದ ತೊಂದರೆ ಅನುಭವಿಸುತ್ತಿದ್ದರೆ, ಹಣದುಬ್ಬರದ ಕುರಿತು ರಾಜಕೀಯ ನಾಯಕರು ನೀಡುವ ಅರ್ಥವಿಲ್ಲದ ಹೇಳಿಕೆಗಳು ಜನರ ತಾಳ್ಮೆಯನ್ನು ಆಕ್ರೋಶಕ್ಕೆ ಬದಲಾಯಿಸುವಂತಿವೆ.

ಇದಕ್ಕೆ ಉದಾಹರಣೆಯಾಗಿ  ಅಸಂಬದ್ಧ, ಬಾಲಿಶ ಹೇಳಿಕೆಯನ್ನೊಂದನ್ನು ನೀಡಿರುವ ಬಿಜೆಪಿ ನಾಯಕರೊಬ್ಬರ ಮಾತು ತೀವೃ ವಿವಾದಕ್ಕೆ ಈಡಾಗಿದೆ . ಅಷ್ಟಕ್ಕೂ ಅವರಂದಿದ್ದು ಏನಂತಿರಾ.. ಮುಂದೆ ಓದಿ.
 
ದೇಶದ ರಾಜಧಾನಿಯಲ್ಲಿ ಟೋಮೆಟೋ ಬೆಲೆ 60 ರಿಂದ 80 ರೂಪಾಯಿಗಳಿಗೆ ಏರಿಕೆ ಕಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.  ಆಡಳಿತಾರೂಢ ಪತ್ರದ ಮೇಲೆ ಟೀಕಾ ಪ್ರಹಾರವಾಗುತ್ತಿದೆ. ತಮ್ಮ ಸರಕಾರದ ಮೇಲೆ ಹಣದುಬ್ಬರದ ಟೀಕೆಯನ್ನು  ಸಹಿಸದಾದ ಕೇಸರಿ ಪಕ್ಷದ ಮಹಾಶಯನ ಪ್ರಕಾರ ಟೋಮೆಟೋ ಶ್ರೀ ಸಾಮಾನ್ಯನು ಉಪಯೋಗಿಸುವ ತರಕಾರಿಯೇ ಅಲ್ಲವಂತೆ. ಅದನ್ನು ಬಳಸುವುದು ಕೇವಲ ಶ್ರೀಮಂತರು  ಮತ್ತು  ಕೆಂಪು ಗಲ್ಲವನ್ನು ಹೊಂದಿರುವವರು ಮಾತ್ರವಂತೆ... ಏನಂತೀರಾ ಇದಕ್ಕೆ?? 
 
ಪತ್ರಕರ್ತರ ಜತೆ ಮಾತನಾಡುತ್ತಿದ್ದ  ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ರಾಜ್ಯಸಭಾ ಸದಸ್ಯರಾಗಿರುವ ಪ್ರಭಾತ್ ಜಾ "ದೇಶದಲ್ಲಿ ಬೇಳೆ ಬೆಲೆ ಬಹಳ ಕಡಿಮೆಯಾಗಿದೆ. ಹಣದುಬ್ಬರದಲ್ಲಿ ಇಳಿಕೆ ಕಾಣುತ್ತಿದೆ. ಆದರೆ ನೀವು  ಟೊಮೆಟೋ ಬೆಲೆ ಏರಿಕೆಯ ಸಮಸ್ಯೆಯನ್ನಿಟ್ಟುಕೊಂಡು ಗಲಾಟೆ ಮಾಡುತ್ತಿದ್ದೀರಿ.  ಟೋಮೆಟೋ ತಿನ್ನುವುದು ಕೇವಲ ಶ್ರೀಮಂತರು ಮತ್ತು ಕೆಂಪು ಕೆನ್ನೆಯುಳ್ಳವರು"  ಎನ್ನುವುದರ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. 
 
ನಂತರ ತಾವಾಡಿದ ಮಾತಿನ ತಪ್ಪನ್ನು ಅರ್ಥ ಮಾಡಿಕೊಂಡ ಅವರು. ತಮ್ಮನ್ನು ತಾವು ಸಾವರಿಸಿಕೊಳ್ಳುತ್ತ  ಮಳೆಯ ಕಾರಣದಿಂದ  ದೇಶದ ಅನೇಕ ಸ್ಥಳಗಳಲ್ಲಿ ಮಾಲುಗಳನ್ನು ಸಾಗಿಸಲು ಕಷ್ಟವಾಗುತ್ತಿದೆ. ಆ ಕಾರಣದಿಂದ ಟೋಮೆಟೋ ಬೆಲೆ ಹೆಚ್ಚಾಗಿದೆ ಎಂದರು.

Share this Story:

Follow Webdunia kannada