Select Your Language

Notifications

webdunia
webdunia
webdunia
webdunia

ಪೋರ್ನ್ ವೆಬ್‌ಸೈಟ್‌ಗಳ ಭಾಗಾಂಶ ನಿಷೇಧ ತೆರವು: ಕೇಂದ್ರ ಸರಕಾರ

ಪೋರ್ನ್ ವೆಬ್‌ಸೈಟ್‌ಗಳ ಭಾಗಾಂಶ ನಿಷೇಧ ತೆರವು: ಕೇಂದ್ರ ಸರಕಾರ
ನವದೆಹಲಿ , ಮಂಗಳವಾರ, 4 ಆಗಸ್ಟ್ 2015 (19:58 IST)
ಕೇಂದ್ರ ಸರಕಾರ 857 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಿರುವ ಕ್ರಮ ವ್ಯಾಪಕ ಟೀಕೆಗೊಳಗಾಗಿದ್ದರಿಂದ, ಇದೀಗ ಭಾಗಾಂಶ ವೆಬ್‌ಸೈಟ್‌‌ಗಳಿಗೆ ಹೇರಿದ ನಿಷೇಧ ಹಿಂದಕ್ಕೆ ಪಡೆಯಲಾಗಿದೆ. ಆದರೆ ಮಕ್ಕಳ ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿಷೇಧ ಮುಂದುವರಿದಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. 
 
ಇದೀಗ ಭಾಗಾಂಶ ವೆಬ್‌ಸೈಟ್‌‌ಗಳಿಗೆ ಹೇರಿದ ನಿಷೇಧ ಹಿಂದಕ್ಕೆ ಪಡೆಯಲಾಗಿದೆ ಎನ್ನುವ ಬಗ್ಗೆ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಮಕ್ಕಳ ಪೋರ್ನ್ ವೆಬ್‌ಸೈಟ್‌ಗಳಲ್ಲದವುಗಳಿಗೆ ನಿಷೇಧ ಹಿಂಪಡೆಯಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.  
 
ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವಾಲಯ ಐಟಿ ಕಾಯ್ದೆ ಅನ್ವಯ 79(3)(ಬಿ) 2000 ರಂತೆ ಅನೈತಿಕ ಮತ್ತು ಅಸಭ್ಯ ವಾಗಿರುವ 857 ವೆಬ್‌ಸೈಟ್‌ಗಳನ್ನು ನಿಷೇಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  
 
ಕಳೆದ ಜುಲೈ ತಿಂಗಳಲ್ಲಿ ವಯಸ್ಕರ ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿಷೇಧ ಹೇರುವುದು ನಮ್ಮ ಕೆಲಸವಲ್ಲ ಸರಕಾರದ ಕೆಲಸ ಎಂದು ಸುಪ್ರೀಂಕೋರ್ಟ್ ಹೇಳಿದ ಹಿನ್ನೆಲೆಯಲ್ಲಿ ಸರಕಾರ ಅಶ್ಲೀಲ ವೆಬ್‌ಸೈಟ್‌ಗಳ ಮೇಲೆ ಸಮರ ಸಾರಿದೆ.

Share this Story:

Follow Webdunia kannada