Select Your Language

Notifications

webdunia
webdunia
webdunia
webdunia

ಪೂನಂ ಪಾಂಡೆ ಹೇಳಿದ್ದಕಾಗಿ ಡಿಐಜಿ ಮಾಡೆಲ್‌ ಮೇಲೆ ರೇಪ್‌ ಮಾಡಿದ್ದಾನೆ

ಪೂನಂ ಪಾಂಡೆ ಹೇಳಿದ್ದಕಾಗಿ ಡಿಐಜಿ ಮಾಡೆಲ್‌ ಮೇಲೆ ರೇಪ್‌ ಮಾಡಿದ್ದಾನೆ
ಮುಂಬೈ , ಶುಕ್ರವಾರ, 1 ಆಗಸ್ಟ್ 2014 (17:26 IST)
ಪೂನಂ ಪಾಂಡೆ ಹೇಳಿದ್ದಕ್ಕಾಗಿ ಡಿಐಜಿ ಸುನೀಲ್‌ ಪಾರಸ್ಕಾರ್‌ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅತ್ಯಾಚ್ಯಾರಕ್ಕೊಳಗಾದ ಮಾಡೆಲ್‌ ಆರೋಪಿಸಿದ್ದಾಳೆ.  
 
ಮುಂಬೈ ಕ್ರೈಮ್‌ ಬ್ರ್ಯಾಂಚ್ ಈ ಪ್ರಕರಣದ ಕುರಿತು ಶೀಘ್ರದಲ್ಲಿ ಮಾಡೆಲ್‌ ಪೂನಂ ಪಾಂಡೆಯವರನ್ನು ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. 
 
ಪೂನಂ ಮತ್ತು ನನ್ನ ನಡುವೆ ಪೈಪೋಟಿ ಇದ್ದ ಕಾರಣದಿಂದಾಗಿ ಆಕೆಯ ಒತ್ತಾಯದಿಂದಾಗಿ ಪಾರಸ್ಕಾರ್ ನನ್ನನ್ನು ಶೋಷಿಸುವ ಕೃತ್ಯದಲ್ಲಿ ತೊಡಗಿರಬಹುದು ಎಂದು ಬಲಿಪಶುವಾದ ಮಾಡೆಲ್ ತಿಳಿಸಿದ್ದಾಳೆ. 
 
ಯಾವಾಗಲು ಸುದ್ದಿಯಲ್ಲಿರುವ ಪೂನಂ ಮತ್ತೊಂದು ಬಾರಿ ವಿವಾದದ ಸುಳಿಗೆ ಸಿಲುಕಿದ್ದಾಳೆ. ಆರೋಪಿ ಡಿಐಜಿ ಪಾರಸ್ಕಾರ್‌ನೊಂದಿಗೆ ಪೂನಂ ಹತ್ತಿರದ ಸಂಬಂಧ ಹೊಂದಿದ್ದಾಳೆ. ಆದ್ದರಿಂದಲೇ ಡಿಐಜಿ ನನಗೆ ತೊಂದರೆ ನೀಡಿರಬಹುದು  ಎಂದು ಮಾಡೆಲ್ ಆರೋಪಿಸಿದ್ದರಿಂದ, ಅಪರಾಧ ದಳದ ಪೊಲೀಸರು ಪೂನಂ ಅವರಿಗೆ ಡಿಐಜಿಯೊಂದಿಗಿರುವ ಸಂಬಂಧ ಪ್ರಶ್ನಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ಇಷ್ಟೆ ಅಲ್ಲ, ಪೀಡಿತ ಮಹಿಳೆ ಮತ್ತು ಪೂನಂ ಪಾಂಡೆ ನಡುವೆ ಕೆಲವು ಟ್ವಿಟ್ಸ್‌‌‌ಗಳು ಹರಿದಾಡಿವೆ.  ಈ ಟ್ವಿಟ್ಸ್‌ಗಳನ್ನು ಪೋಲಿಸರು ತನಿಖೆ ಮಾಡುತ್ತಿದ್ದಾರೆ. ಪೂನಂ ಪಾಂಡೆ ಹೇಳಿದ್ದರಿಂದ ಡಿಐಜಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜುಲೈ 3 ರಂದು ಮಾಡೆಲ್‌ ಟ್ವಿಟ್‌ ಮಾಡಿದ್ದಳು. 
 
ಡಿಐಜಿ ಪಾರಸ್ಕರ್‌ ಪೀಡಿತ ಮಹಿಳೆಗೆ ಕ್ಷಮೆ ಕೇಳುತ್ತಿರುವ ಕೆಲವು ಸಂದೇಶಗಳನ್ನು ಕ್ರೈಂ ಬ್ರ್ಯಾಂಚ್‌ ಪರಿಶೀಲನೆ ಮಾಡುತ್ತಿದೆ. ಆದರೆ ಆತ ಮಾಡೆಲ್‌ಗೆ ಯಾವ ಕಾರಣಕ್ಕಾಗಿ ಕ್ಷಮೆ ಕೇಳುತ್ತಿದ್ದ ಎನ್ನುವ ಸಂದೇಶಗಳು ಲಭ್ಯವಾಗಿಲ್ಲ.  
 
 ಪೀಡಿತೆ ಮಹಿಳೆಯ ಹೇಳಿಕೆಯನ್ನು ಸಿಆರ್‌ಪಿಸಿ ಕಾಯ್ದೆ ಅನ್ವಯ 164ರ ಅಡಿಯಲ್ಲಿ ದಾಖಲೆಗಳನ್ನು ಮೆಜಿಸ್ಟ್ರೆಟ್‌‌ ಎದುರಿಗೆ ರಿಕಾರ್ಡ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada