Webdunia - Bharat's app for daily news and videos

Install App

ಬಂಧನ ಭೀತಿಯಲ್ಲಿದ್ದ ಪೂಜಾ ಖೇಡ್ಕರ್‌ಗೆ ಸಿಕ್ಕಿತು ಬಿಗ್‌ ರಿಲೀಫ್

Sampriya
ಸೋಮವಾರ, 12 ಆಗಸ್ಟ್ 2024 (16:53 IST)
Photo Courtesy X
ನವದೆಹಲಿ: ಬಂಧನ ಭೀತಿ ಎದುರಿಸುತ್ತಿರುವ ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ ಅವರಿಗೆ ದೆಹಲಿ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿ ಆದೇಶ ಹೊರಡಿಸಿದೆ.

ಒಬಿಸಿ ಕೋಟಾ ವಂಚನೆ ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣ ಸಂಬಂಧ ಬಂಧನಕ್ಕೆ ಆಗಸ್ಟ್‌ 21ರ ವರೆಗೆ ಅವರನ್ನು ಬಂಧಿಸದಂರೆ ಮಧ್ಯಂತರ ತಡೆ ನೀಡಿದ್ದು, ಈ ಮೂಲಕ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.  

ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಪೂಜಾ ಖೇಡ್ಕರ್ ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

2022 ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಲ್ಲಿಸಿದ ಅರ್ಜಿಯಲ್ಲಿ 'ತಪ್ಪು ಮಾಹಿತಿ ನೀಡಿದ' ಆರೋಪದ ಮೇಲೆ ದೆಹಲಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇತ್ತೀಚೆಗೆ, ಕೇಂದ್ರ ಲೋಕಸೇವಾ ಆಯೋಗವು ಜುಲೈ 31 ರಂದು ಪೂಜಾ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೇ ಭವಿಷ್ಯದಲ್ಲಿ ಯಾವುದೇ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ಹೇರಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ವಿನಯ್ ನರ್ವಾಲ್ ಒಂದೂವರೆ ಗಂಟೆ ಬದುಕಿದ್ದರೂ ಸಹಾಯ ಸಿಗಲಿಲ್ಲ, ಸಹೋದರಿ ಆಕ್ರೋಶ

Pehalgam: ಸರ್ಜಿಕಲ್ ಸ್ಟ್ರೈಕ್ ಹೊರತಾಗಿ ಪಾಕಿಸ್ತಾನಕ್ಕೆ ಭಾರತ ಹೇಗೆಲ್ಲಾ ಹೊಡೆತ ನೀಡಿದೆ ನೋಡಿ

Karnataka Rains: ರಾಜ್ಯದಲ್ಲಿ ಇಂದು ಮಳೆಗೆ ಒಂದು ದಿನ ಬಿಡುವು

Pehalgam Attack: ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೊನೆಯ ವಿಡಿಯೋ ವೈರಲ್: ಪತ್ನಿ ಜೊತೆ ಖುಷಿಯಾಗಿದ್ದ ಕೊನೆಯ ಕ್ಷಣ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

ಮುಂದಿನ ಸುದ್ದಿ
Show comments