Webdunia - Bharat's app for daily news and videos

Install App

ಚುನಾವಣೆ: ದೇಶಾದ್ಯಂತ 300 ಕೋಟಿ ರೂ ಅಕ್ರಮ ಹಣ ವಶಕ್ಕೆ

Webdunia
ಬುಧವಾರ, 23 ಏಪ್ರಿಲ್ 2014 (19:40 IST)
ಚುನಾವಣಾ ಆಯೋಗದ ನಿರ್ಬಂಧದ ಹೊರತಾಗಿಯೂ, ರಾಜಕೀಯ ಪಕ್ಷಗಳು ಮದ್ಯ ಮತ್ತು ಹಣದ ಮೂಲಕ ಮತದಾರರಿಗೆ ಆಮಿಷ ಒಡ್ಡುವುದನ್ನು ನಿಲ್ಲಿಸಿಲ್ಲ ಎಂಬುದು, 28 ರಾಜ್ಯಗಳ ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಅಧಿಕಾರಿಗಳ ವರದಿ ಹೇಳುತ್ತಿದೆ.  
 
ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮತದಾರರಿಗೆ ಲಂಚವಾಗಿ ಬಳಕೆಯಾಗಲಿದ್ದ 300 ಕೋಟಿ ರೂ, 1.33 ಲಕ್ಷ ಲೀಟರ್ ಆಲ್ಕೊಹಾಲ್ ಮತ್ತು  30,000 ಕೆಜಿ ಮಾದಕ ದ್ರವ್ಯವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
 
ಚುನಾವಣೆ ಪ್ರಚಾರ ಸಮಯದಲ್ಲಿ ಕಪ್ಪು ಹಣ ಬಳಕೆ ಹೊಸ ವಿಷಯವೇನಲ್ಲ. ಆದರೆ ಈ ಅಪರಾಧವನ್ನು ನಿಲ್ಲಿಸಲು ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಬಹಳ ಬಿಗಿ ಕ್ರಮವನ್ನು ಕೈಗೊಳ್ಳಲಾಗಿದೆ. 
ಚುನಾವಣಾ ಕಾವಲುನಾಯಿಯ ಇತ್ತೀಚಿನ ವರದಿಯ ಪ್ರಕಾರ 28 ರಾಜ್ಯಗಳನ್ನು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ನೋಡಿದರೆ ಏಪ್ರಿಲ್ 17ರಿಂದ ಇಲ್ಲಿಯವರೆಗೆ ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕ್ರಮವಾಗಿ ದೊಡ್ಡ ಪ್ರಮಾಣದ ಮಾದಕದ್ರವ್ಯವನ್ನು  ವಶಪಡಿಸಿಕೊಳ್ಳಲಾಗಿದೆ. 
 
ಆದರೆ ಈ ಅಂಕಿಅಂಶಗಳನ್ನು ಆಯೋಗ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. 
 
ಮದ್ಯ ಮತ್ತು ಹಣ ಚೆಲ್ಲುವುದರಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. 
 
ಮೂಲಗಳ ಪ್ರಕಾರ ಸಾವಿರಾರು ಕೋಟಿ ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಹೆರಾಯಿನ್, ಅಫೀಮು, ಹ್ಯಾಶ್, ವೀಡ್ ಮತ್ತು ರಾಸಾಯನಿಕ ಔಷಧಗಳು ಸೇರಿವೆ. 
 
ಹಣ ಮತ್ತು ಮಾದಕದ್ರವ್ಯಗಳ ಅಕ್ರಮ ಹರಿವು ನಿಗ್ರಹಿಸಲು ಆಯೋಗ ಆದಾಯ ಮತ್ತು ಗುಪ್ತಚರ ಇಲಾಖೆಗಳ  ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಮಿತಿಯೊಂದನ್ನು ಸ್ಥಾಪಿಸಿದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ