Select Your Language

Notifications

webdunia
webdunia
webdunia
webdunia

ಕೊನೆಯಾಗಲಿ ದ್ವೇಷದ ರಾಜಕಾರಣ: ರಾಹುಲ್ ಗಾಂಧಿ

ಕೊನೆಯಾಗಲಿ ದ್ವೇಷದ ರಾಜಕಾರಣ: ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 27 ಜುಲೈ 2014 (10:17 IST)
ಉತ್ತರಪ್ರದೇಶದ ಸಹಾರಾಣಪುರದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಬಗ್ಗೆ ತೀವೃ ದುಃಖ ವ್ಯಕ್ತಪಡಿಸಿರುವ  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ವೇಷದ ರಾಜಕಾರಣ ಕೊನೆಯಾಗಲೇಬೇಕು ಎಂದಿದ್ದಾರೆ. 

ರಾಹುಲ್ ಸಾಮುದಾಯಿಕ ಉನ್ಮಾದವನ್ನು ಹರಡದಂತೆ, ಶಾಂತಿಯನ್ನು ಕಾಪಾಡುವಂತೆ ಎಲ್ಲ ಪಕ್ಷದವರಲ್ಲೂ ರಾಹುಲ್  ಮನವಿ ಮಾಡಿದ್ದಾರೆ.
 
"ಸಹರಾಣಪುರದಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ  ಕೇಳಿ ನನಗೆ ತುಂಬ ದುಃಖವಾಗಿದೆ. ಭೇದ ಚಿಂತನೆ ಮತ್ತು ದ್ವೇಷಕ್ಕೆ ದೇಶದಲ್ಲಿ ಯಾವ ಸ್ಥಾನವೂ ಇಲ್ಲ. ದ್ವೇಷದ ರಾಜಕಾರಣ ನಿಲ್ಲಲೇ ಬೇಕಿದೆ. ಆ ಕಾರಣ ಶಾಂತಿಯನ್ನು ಕಾಪಾಡುವಂತೆ, ಕೋಮುವಾದವನ್ನು ಹರಡದಂತೆ ನಾನು ಎಲ್ಲ ರಾಜಕೀಯ ಪಕ್ಷಗಳನ್ನು ಮನವಿ ಮಾಡಿಕೊಳ್ಳುತ್ತೇನೆ" ಎಂದು ಅವರು ಹೇಳಿದ್ದಾರೆ. 
 
ಕೇವಲ ಜಮೀನೊಂದರ ಕುರಿತಂತೆ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ 2 ಜನ ಸತ್ತು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯ ಮತ್ತು ಗೋಲಿಬಾರಿಯಂತಹ ಕೃತ್ಯಗಳು ನಡೆದಿದ್ದು,  ಸುತ್ತಲಿನ ಕೆಲವು ಇಲಾಖೆಗಳಲ್ಲಿ ಕರ್ಫ್ಯೂವನ್ನು ಘೋಷಿಸಲಾಗಿದೆ. 

Share this Story:

Follow Webdunia kannada