Select Your Language

Notifications

webdunia
webdunia
webdunia
webdunia

ಯುವತಿಯ ಮೇಲೆ 5 ತಿಂಗಳು ನಿರಂತರ ರೇಪ್ ಎಸಗಿದ ರಾಜಕಾರಣಿಯ ಪುತ್ರ

ಯುವತಿಯ ಮೇಲೆ 5 ತಿಂಗಳು ನಿರಂತರ ರೇಪ್ ಎಸಗಿದ ರಾಜಕಾರಣಿಯ ಪುತ್ರ
ಖುಷಿನಗರ್(ಉತ್ತರಪ್ರದೇಶ): , ಸೋಮವಾರ, 6 ಜುಲೈ 2015 (18:24 IST)
ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಲ್ಯಾಬ್ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಕೀಯ ನಾಯಕನೊಬ್ಬನ ಪುತ್ರ ತನ್ನ ನಾಲ್ಕು ಗೆಳೆಯರೊಂದಿಗೆ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಅತ್ಯಾಚಾರದ ವಿಡಿಯೋ ಕೂಡಾ ಮಾಡಿದ ಹೇಯ ಘಟನೆ ವರದಿಯಾಗಿದೆ.
 
ಘಟನೆಯ ಕುರಿತು ಮಾಹಿತಿ ಪಡೆದ ದಕ್ಷ ಪೊಲೀಸರ ತಂಡ ಪ್ರಮುಖ ಆರೋಪಿ ರಾಜನ್ ಗೌತಮ್ ಸೇರಿದಂತೆ ಇತರ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
 
ಇಂತಹ ಹೇಯ ಘಟನೆ ಖುಶಿನಗರ್‌ದ ನೆಬುವಾ ನವರಂಗೀಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಹೊಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ಆರೋಪಿ ರಾಜನ್ ಗೌತಮ್, ತನ್ನ ನಾಲ್ಕು ಮಂದಿ ಗೆಳೆಯರ ನೆರವಿನಿಂದ ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಅತ್ಯಾಚಾರವೆಸಗುತ್ತಿರುವ ವಿಡಿಯೋ ಕೂಡಾ ತೆಗೆದ ಆರೋಪಿಗಳು ಯಾರಿಗಾದರೂ ಹೇಳಿದಲ್ಲಿ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ. 
 
ಆರೋಪಿಗಳು ಸುಮಾರು ಐದು ತಿಂಗಳುಗಳ ಕಾಲ ಬ್ಲ್ಯಾಕ್‌ಮೇಲ್ ಮಾಡಿ ನಿರಂತರವಾಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಆರೋಪಿಗಳು ವಿಡಿಯೋವನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವೆಬ್‌ಸೈಟ್ ನೋಡಿದ ಯುವತಿಯ ಸಹೋದರ ಸಹೋದರಿಗೆ ವಿವರಣೆ ಕೇಳಿದಾಗ ಹೇಯ ಘಟನೆ ಬಹಿರಂಗಪಡಿಸಿದ್ದಾಳೆ.
 
ಗ್ಯಾಂಗ್‌ರೇಪ್ ಪ್ರಮುಖ ಆರೋಪಿ ರಾಜನ್ ಗೌತಮ್ ತಂದೆ ಕಾಂಗ್ರೆಸ್ ಟಿಕೆಟ್ ಮೇಲೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ವರದಿಗಳ ಪ್ರಕಾರ ಪ್ರಕರಣವನ್ನು ಹಿಂಪಡೆಯುವಂತೆ ಯುವತಿಯ ಕುಟುಂಬದ ಮೇಲೆ ಆರೋಪಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada