Webdunia - Bharat's app for daily news and videos

Install App

15 ದಿನಗಳಲ್ಲಿ 7 ಜನರನ್ನು ಕೊಂದ ಸರಣಿ ಹಂತಕ, ಅತ್ಯಾಚಾರಿ ಬಂಧನ

Webdunia
ಸೋಮವಾರ, 15 ಸೆಪ್ಟಂಬರ್ 2014 (17:09 IST)
ಐವರು ಮಹಿಳೆಯರು ಮತ್ತು 2 ವರ್ಷ ವಯಸ್ಸಿನ ಬಾಲಕಿ ಸೇರಿದಂತೆ 7 ಜನರು ಹತ್ಯೆ ಮಾಡಿ ರಕ್ತಪಾತ ಹರಿಸಿದ ಸರಣಿ ಹಂತಕ ಮತ್ತು ಅತ್ಯಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸೇಲಂನ ಪೆತಾನೈಕೆನ್‌ಪಾಳ್ಯಂ ಬಳಿಕ ಕತಿರಿಪಟ್ಟಿ ಗ್ರಾಮದ ಟ್ರಕ್ ಚಾಲಕ 27 ವರ್ಷದ ಸುಬ್ರಮಣ್ಯನ್ ಸೇಲಂ, ಅಲಿಯಲೂರು ಮತ್ತು ತಿರುಚಿ ಜಿಲ್ಲೆಗೆಳಲ್ಲಿ ಭಯಾನಕ ಸರಣಿ ಹತ್ಯೆಗಳನ್ನು ನಡೆಸಿದ್ದಾನೆ. ಸುಬ್ರಮಣಿಯನ್ 7 ಜನರ ಹತ್ಯೆಯನ್ನು ಕೇವಲ 15 ದಿನಗಳ ಅವಧಿಯಲ್ಲಿ ಮಾಡಿ ದಾಖಲೆ ನಿರ್ಮಿಸಿದ್ದಾನೆ.

ಒಬ್ಬಂಟಿ ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮಹಿಳೆಯರ ಮೇಲೆ ದಾಳಿ ಮಾಡಿ ಕೆಲವು ಮಹಿಳೆಯರ ಮೇಲೆ ಅತ್ಯಾಚಾರ ಕೂಡ ಅವನು ಮಾಡಿದ್ದಾನೆ. ತಲೈವಾಸಲ್ ಬಳಿ ಪೆರಿಯಾರಿ ಗ್ರಾಮದಲ್ಲಿ ಅಂಗಡಿಮಾಲೀಕನ ಮೇಲೆ ಸುಬ್ರಮಣಿಯನ್ ದಾಳಿ ಮಾಡಿ ದರೋಡೆಗೆ ಯತ್ನಿಸಿದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ. ಗ್ರಾಮಸ್ಥರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದಾಗ ಮೂರು ಜಿಲ್ಲೆಗಳಲ್ಲಿ ಏಳು ಹತ್ಯೆಗಳನ್ನು ಮಾಡಿದ್ದಾಗಿ ಒಪ್ಪಿಕೊಂಡ. ಸುಬ್ರಮಣ್ಯ ಸರಣಿ ಹಂತಕನ ವ್ಯಕ್ತಿವಿವರಗಳಿಗೆ ಸರಿಹೊಂದುತ್ತಾನೆ ಎಂದು ತನಿಖೆದಾರರು ಹೇಳಿದ್ದಾರೆ. ಸದಾ ಕೌಟುಂಬಿಕ ಕಲಹದಿಂದ ತುಂಬಿರುತ್ತಿದ್ದ ಮನೆಯಲ್ಲಿ ಅವನ ಮಲತಾಯಿ ಚಿತ್ರಹಿಂಸೆ ನೀಡುತ್ತಿದ್ದರು.

ಮೂರು ಬಾರಿ ಮದುವೆಯಾಗಿದ್ದ ತಂದೆ ಚಿತ್ರಹಿಂಸೆ ತಡೆಯಲು ಏನೂ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಬ್ರಮಣ್ಯನ್‌ನ ಮೊದಲ ಬಲಿಪಶು ಅವನ ಅಜ್ಜಿ ಅಯ್ಯಮ್ಮಾಳ್. 65ವರ್ಷ ವಯಸ್ಸಿನ ಅಜ್ಜಿಯನ್ನು 2012ರಲ್ಲಿ ಕೊಲೆ ಮಾಡಿದ್ದ. ಪೊಲೀಸರು ಬಂಧಿಸಿ ಒಂದು ತಿಂಗಳು ಜೈಲಿನಲ್ಲಿದ್ದ ಅವನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅದಾದ ನಂತರ ಸೇಲಂ ಮತ್ತು ಅರಿಯಲೂರು ಜಿಲ್ಲೆಯ ಹೆದ್ದಾರಿ ದರೋಡೆ ಆರಂಭಿಸಿದ. ಸೇಲಂ ಜಿಲ್ಲೆಯ ಉಲಿಪುರಂನಲ್ಲಿ ಚಿನ್ನಾತಾಯಿ ಮಹಿಳೆಯ ತಲೆಗೆ ಕಲ್ಲಿನಿಂದ ಜಜ್ಜಿ ಅವಳ ಮನೆಯಲ್ಲಿದ್ದ 10,000 ರೂ. ದರೋಡೆ ಮಾಡಿದ್ದ.
 ಮುಂದಿನ ಪುಟ ನೋಡಿ 

ಮರುದಿನವೇ 82 ವರ್ಷದ ವೃದ್ಧೆ ಜಯಮೇಲುವನ್ನು ಹತ್ಯೆ ಮಾಡಿ 1000 ರೂ. ದೋಚಿದ್ದ.  8 ದಿನಗಳ ನಂತರ ಮತ್ತೆ ತನ್ನ ಹತ್ಯೆ ಮುಂದುವರಿಸಿದ ಕೊಲೆಗಾರ ಅರಿಯಲೂರು ಜಿಲ್ಲೆಯ 75 ವರ್ಷದ ಲಕ್ಷ್ಮಿಯನ್ನು ಮತ್ತು 50 ವರ್ಷದ ಸಾವಿತ್ರಿಯನ್ನು ಹತ್ಯೆ ಮಾಡಿದ.

ಸಾವಿತ್ರಿಯನ್ನು ಹತ್ಯೆ ಮಾಡುವ ಮುಂಚೆ ಅತ್ಯಾಚಾರ ಮಾಡಿ ಅವರ ಮನೆಗಳಿಂದ ಕೇವಲ 900 ರೂ. ಕದ್ದೊಯ್ದಿದ್ದ. ಸೆ. 5ರಂದು ಸುಬ್ರಮಣ್ಯನ್  2ವರ್ಷದ ಮಗು ಸೇರಿದಂತೆ ಮೂವರನ್ನು ಹತ್ಯೆ ಮಾಡಿದ. ಅರಿಯಲೂರು ಜಿಲ್ಲೆಯಲ್ಲಿ ಪತಿ ಜೊತೆ ಮಲಗಿದ್ದ ಪಾರ್ವತಿ ಮೇಲೆ ದಾಳಿ ಮಾಡಿದ.

ಪತಿ ವೇಲುಮುರುಗನ್ ಪತ್ನಿಯ ರಕ್ಷಣೆಗೆ ಬಂದಾಗ ಅವನ ಗಂಟಲನ್ನು ಚೂರಿಯಿಂದ ಸೀಳಿ ಕೊಂದನಂತರ ಪಾರ್ವತಿಯನ್ನು ರೇಪ್ ಮಾಡಿ ಚೂರಿಯಿಂದ ಇರಿದು ಸಾಯಿಸಿದ್ದ. ಮಗುವಿನ ತಲೆಯನ್ನು ಗೋಡೆಗೆ ಜಜ್ಜಿ ಹತ್ಯೆಮಾಡಿದ್ದ. ಪೊಲೀಸರು ಸುಬ್ರಮಣಿಯನ್ ವಿರುದ್ಧ 7 ಮಂದಿ ಹತ್ಯೆ ಮತ್ತು 3 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments