ನವದೆಹಲಿ: ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಆರಂಭವಾಗಿ 8 ವರ್ಷವೇ ಆಗಿದೆ. ಇನ್ನೂ ಕೆಲವರಿಗೆ ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಯಾರು ಅರ್ಹರು ಎಂಬ ಮಾಹಿತಿಯಿರಲ್ಲ. ಈ ಯೋಜನೆಯ ವಿವರಗಳು ಇಲ್ಲಿದೆ ನೋಡಿ.
14.2 ಕೆಜಿ ಸಿಲಿಂಡರ್ ಸಂಪರ್ಕಕ್ಕಾಗಿ 1,600 ರೂ.ಗಳ ಅಥವಾ 5 ಕೆಜಿ ಸಿಲಿಂಡರ್ ಗೆ 1150 ರೂ. ನೀಡಲಾಗುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯ ಫಲಾನುಭವಿಗಳಿಗೆ ಅವರ ಠೇವಣಿ ಉಚಿತ ಸಂಪರ್ಕದೊಂದಿಗೆ ಮೊದಲ ಎಲ್ ಪಿಜಿ ಮರುಪೂರಣ ಮತ್ತು ಸ್ಟವ್ ಎರಡನ್ನೂ ಉಚಿತವಾಗಿ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಕನಿಷ್ಠ 18 ವಯಸ್ಸು ದಾಟಿದ ಮಹಿಳಾ ಅರ್ಜಿದಾರರು
ಎಸ್ ಸಿ/ಎಸ್ ಟಿ ಕುಟುಂಗಳು
ಹಿಂದುಳಿದ ವರ್ಗದವರು
ಬುಡಕಟ್ಟು ಜನರು
ದ್ವೀಪ/ನದಿ ದ್ವೀಪದ ನಿವಾಸಿಗಳು
ಟೀ ಮತ್ತು ಎಕ್ಸ್-ಗಾರ್ಡನ್ ಬುಡಕಟ್ಟುಗಳು
ಯಾವೆಲ್ಲಾ ದಾಖಲೆಗಳು ಬೇಕು?
ಆಯಾ ರಾಜ್ಯ ಸರ್ಕಾರ ನೀಡಿದ ಪಡಿತರ ಚೀಟಿ
ವಿಳಾಸ ಪುರಾವೆ
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ವಿದ್ಯುತ್, ನೀರು ಅಥವಾ ಫೋನ್ ಸಂಪರ್ಕ ಬಿಲ್
ಅರ್ಜಿದಾರರ ಬ್ಯಾಂಕ್ ಪಾಸ್ಬುಕ್
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ https://pmuy.gov.in/ujjwala2.htiml ಎಂಬ ವೆಬ್ ವಿಳಾಸಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು.
2016 ರಲ್ಲಿ ಮೋದಿ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಒಂದು ಬಡವರಿಗೂ ಅಡುಗೆ ಅನಿಲ ಒದಗಿಸಿ ಗ್ರಾಮೀಣ ಮಹಿಳೆಯರ ಕಷ್ಟ ನಿವಾರಿಸುವುದು ಇದರ ಉದ್ದೇಶವಾಗಿದೆ. ಎಷ್ಟೋ ಜನ ಈಗಲೂ ಕಟ್ಟಿಗೆ, ಬೆರಣಿ ಮುಂತಾದವುಗಳನ್ನು ಬಳಸಿ ಒಲೆ ಉರಿಸುತ್ತಿದ್ದಾರೆ. ಅಂತಹವರಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಸಹಾಯ ಮಾಡಲಾಗುತ್ತಿದೆ.