Select Your Language

Notifications

webdunia
webdunia
webdunia
webdunia

ವಿದೇಶಗಳಲ್ಲಿ ಮಾನಸಿಕ ಸ್ವಾಸ್ಥ ಕಳೆದುಕೊಳ್ಳುತ್ತಿರುವ ಪ್ರಧಾನಿ ಮೋದಿ: ಕಾಂಗ್ರೆಸ್

ವಿದೇಶಗಳಲ್ಲಿ ಮಾನಸಿಕ ಸ್ವಾಸ್ಥ ಕಳೆದುಕೊಳ್ಳುತ್ತಿರುವ ಪ್ರಧಾನಿ ಮೋದಿ: ಕಾಂಗ್ರೆಸ್
ನವದೆಹಲಿ , ಮಂಗಳವಾರ, 18 ಆಗಸ್ಟ್ 2015 (16:01 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ದುಬೈ ಪ್ರವಾಸದ ಸಂದರ್ಭದಲ್ಲಿ ಹಿಂದಿನ ಸರಕಾರಗಳನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್  ಖಂಡಿಸಿದೆ. ಇದೊಂದು ದುರದೃಷ್ಟಕರ ಸಂಗತಿ, ರಾಷ್ಟ್ರಕ್ಕೆ ಅಪಮಾನ ಮತ್ತು ತೀವ್ರ ಖಂಡನೀಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶಗಳಿಗೆ ಭೇಟಿ ನೀಡಿದ ಕೂಡಲೇ ಮಾನಸಿಕ ಸ್ವಾಸ್ಥ ಕಳೆದುಕೊಳ್ಳುತ್ತಿರಬಹುದು ಎಂದು ಲೇವಡಿ ಮಾಡಿದ್ದಾರೆ. 
 
ಗಲ್ಫ್‌ದೇಶದ ಮಸ್ದಾರ್ ಸಿಟಿಯಲ್ಲಿ ಯುಎಇ ಮೂಲದ ಉದ್ಯಮಪತಿಗಳ ಸಭೆಯಲ್ಲಿ ಭಾಷಣ ಮಾಡಿದ್ದ ಮೋದಿ, ಹಿಂದಿನ ಸರಕಾರಗಳ ದುರಾಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿದ್ದ ಅಪರಿಪಕ್ವತೆಯಿಂದಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ನನ್ನ ಸರಕಾರ ಶೀಘ್ರದಲ್ಲಿಯೇ ನೆನೆಗುದಿಗೆ ಬಿದ್ದಿರುವ ವಿಷಯಗಳ ಜಾರಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಮೋದಿ ಹೇಳಿರುವುದು ವಿಪಕ್ಷವಾದ ಕಾಂಗ್ರೆಸ್‌ಗೆ ಬಿಸಿ ಮುಟ್ಟಿದಂತಾಗಿದೆ. 
 
ಹಿಂದಿನ ಸರಕಾರಗಳ ಒಳ್ಳೆಯ ವಿಷಯಗಳನ್ನು ಮಾತ್ರ ನಾನು ತೆಗೆದುಕೊಂಡು ಕೆಟ್ಟ ವಿಷಯಗಳಿಂದ ದೂರವಿರುವುದು ಸಾಧ್ಯವಿಲ್ಲ. ಕೆಲ ಮಹತ್ವದ ನಿರ್ಧಾರಗಳನ್ನು ಹಿಂದಿನ ಸರಕಾರಗಳು ನೆನೆಗುದಿಯಲ್ಲಿಟ್ಟಿವೆ. ಇದೀಗ ನನ್ನ ಸರಕಾರ ಶೀಘ್ರವಾಗಿ ಚಾಲನೆ ನೀಡಲಿದೆ ಎಂದು ಭರವಸೆ ನೀಡಿದರು. 
 
ಮೋದಿಯ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರ ಆರ್‌.ಪಿ.ಎನ್‌.ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶಗಳಿಗೆ ಭೇಟಿ ನೀಡಿದ ಕೂಡಲೇ ಮಾನಸಿಕ ಸ್ವಾಸ್ಥ ಕಳೆದುಕೊಳ್ಳುತ್ತಿರಬಹುದು ಎಂದು ಲೇವಡಿ ಮಾಡಿದ್ದಾರೆ.
 
ಜರ್ಮನಿ, ಕೆನಡಾ ಮತ್ತು ಚೀನಾ ದೇಶಗಳಿಗೆ ಮೋದಿ ಭೇಟಿ ನೀಡಿದಾಗಲೂ ಹಿಂದಿನ ಸರಕಾರಗಳನ್ನು ಟೀಕಿಸಿದ್ದರು. ಮೋದಿ ವರ್ತನೆ ರಾಷ್ಟ್ರಕ್ಕೆ ಅಪಮಾನ ತರುವಂತಹದು ಮತ್ತು ತೀವ್ರ ಖಂಡನೀಯವಾಗಿದೆ ಎಂದು ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada