Select Your Language

Notifications

webdunia
webdunia
webdunia
webdunia

ಮೋದಿ ಮೌನ ಗೊಂದಲಕ್ಕೀಡು ಮಾಡುತ್ತಿದೆ: ಕಾಂಗ್ರೆಸ್

ಮೋದಿ ಮೌನ ಗೊಂದಲಕ್ಕೀಡು ಮಾಡುತ್ತಿದೆ: ಕಾಂಗ್ರೆಸ್
ನವದೆಹಲಿ , ಗುರುವಾರ, 1 ಅಕ್ಟೋಬರ್ 2015 (17:19 IST)
ವಿಶ್ವ ಹಿಂದೂ ಪರಿಷದ್ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ  ಒತ್ತಾಯಿಸುತ್ತಿದ್ದರೂ ಮತ್ತು ಸಂಘದ ನಾಯಕರು ಈ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದರೂ, ಪ್ರಧಾನಿ ಮೋದಿ ಈ ಕುರಿತು ಮೌನವಹಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. 
 
ವಿಹೆಚ್‌ಪಿ ನಾಯಕ ಅಶೋಕ್ ಸಿಂಘಾಲ್ ರಾಮ ಮಂದಿರ ನಿರ್ಮಾಣಕ್ಕೆ ಪಟ್ಟು ಹಿಡಿದಿರುವುದನ್ನು ಮತ್ತು  ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆಯನ್ನು  ಜಾರಿಗೆ ತರುವಂತೆ ಒತ್ತಾಯಿಸುತ್ತಿರುವುದು, ಉಳಿದ ಹಲವು ನಾಯಕರು ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರೂ ಮೋದಿ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಕುರಿತು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಕಿಡಿಕಾರಿದ್ದಾರೆ.
 
"ಮೋದಿಯವರು ಅಧಿಕಾರವನ್ನು ಕೈಗೆತ್ತಿಕೊಂಡ 15 ತಿಂಗಳಲ್ಲಿ ಈ ರೀತಿಯ ವಾತಾವರಣ ಬೆಳೆಯುತ್ತಿದೆ. ಇದು ಕೀಳುಮಟ್ಟದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಬಿಹಾರ್ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಹೇಳಿಕೆಗಳು ಹೆಚ್ಚಾಗುತ್ತಿವೆ", ಎಂದು ಸಿಂಘ್ವಿ ಆರೋಪಿಸಿದ್ದಾರೆ. 
 
"ಮೇಲಿನವರ ಮೌನ ಗೊಂದಲಕ್ಕೀಡು ಮಾಡುತ್ತಿದೆ. ಪ್ರಧಾನಿ ಮೌನ ಇಂತಹ ಪ್ರವೃತ್ತಿಗಳ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಈ ಮೌನ ಶೋಚನೀಯವಾದುದು," ಎಂದು ಸಿಂಘ್ವಿ  ಕಳವಳವನ್ನು ವ್ಯಕ್ತ ಪಡಿಸಿದ್ದಾರೆ. 
 

Share this Story:

Follow Webdunia kannada