Select Your Language

Notifications

webdunia
webdunia
webdunia
webdunia

ಪ್ರಧಾನಮಂತ್ರಿ ನರೇಂದ್ರ ಮೋದಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ , ಮಂಗಳವಾರ, 4 ಆಗಸ್ಟ್ 2015 (15:27 IST)
ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಅಮಾನತ್ತುಗೊಳಿಸಿದ ಪ್ರತಿಯೊಬ್ಬ ಸಂಸದನಿಗೆ ಕಾಂಗ್ರೆಸ್ ಪಕ್ಷ ಬೆಂಬಲವಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಪರಾಧಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
 
ಸಂಸದರನ್ನು ಅಮಾನತ್ತುಗೊಳಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಭ್ರಷ್ಟಾಚಾರದ ಪ್ರಕರಣಗಳ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.ಶೀಘ್ರದಲ್ಲಿಯೇ ಮೋದಿ ಸರಕಾರಕ್ಕೆ ಇದರ ಅನುಭವವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ 44 ಕಾಂಗ್ರೆಸ್ ಸಂಸದರಲ್ಲಿ 25 ಸಂಸದರನ್ನು ಐದು ದಿನಗಳ ಅವಧಿಗೆ ಅಮಾನತ್ತುಗೊಳಿಸಿದ್ದಾರೆ. 
 
ಸಂಸದರನ್ನು ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ  ಸೇರಿದಂತೆ ಇತರ ವಿಪಕ್ಷಗಳು ಕಲಾಪವನ್ನು ಬಹಿರಷ್ಕರಿಸಿವೆ.
 
ಸಂಸದರು ಅಧಿವೇಶನದ ಕಲಾಪದ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರಗಳನ್ನು ಎಸೆಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
 

Share this Story:

Follow Webdunia kannada