Select Your Language

Notifications

webdunia
webdunia
webdunia
webdunia

ದಾಖಲೆಯ ರೀತಿಯಲ್ಲಿ ಮತದಾನ ಮಾಡಲು ಪ್ರಧಾನಿ ಮೋದಿ ಕರೆ

ದಾಖಲೆಯ ರೀತಿಯಲ್ಲಿ ಮತದಾನ ಮಾಡಲು ಪ್ರಧಾನಿ ಮೋದಿ ಕರೆ
ಚೆನ್ನೈ , ಸೋಮವಾರ, 16 ಮೇ 2016 (14:32 IST)
ಇಂದು ನಡೆಯುತ್ತಿರುವ ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ದಾಖಲೆಯ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
 
ಪ್ರಜಾಪ್ರಭುತ್ವದ ಹಬ್ಬದ ದಿನವಾದ ಇಂದು ಮತದಾರರು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಮತದಾರರಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
 
ಇಂದು ತಮಿಳುನಾಡಿನ 232 ವಿಧಾನಸಭಾ ಕ್ಷೇತ್ರಗಳು, ಕೇರಳ 140 ಮತ್ತು ಪುದುಚೇರಿಯ 30 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿವೆ.
 
ಮೂರು ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವರಹಿತವಾಗಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲು ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ವಿಶೇಷವಾಗಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬಿಜೆಪಿ ಖಾತೆಯನ್ನು ತೆಯಲು ರಣತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. 


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಂಡಕ್ಕೆ ಬಿದ್ದ ಬಿಜೆಪಿ ಸಂಸದೆ ಪೂನಮ್ ಬೆನ್