Select Your Language

Notifications

webdunia
webdunia
webdunia
webdunia

ಮೋದಿ ಭೇಟಿಯಾದ ಬಾಹುಬಲಿ!

ಮೋದಿ ಭೇಟಿಯಾದ ಬಾಹುಬಲಿ!
ನವದೆಹಲಿ , ಸೋಮವಾರ, 27 ಜುಲೈ 2015 (11:40 IST)
ವಿಶ್ವದಾದ್ಯಂತ ಧೂಳೆಬ್ಬಿಸಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ನಾಯಕ ಪ್ರಭಾಸ್, ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಭಾಸ್ ಚಿಕ್ಕಪ್ಪ, ಹಿರಿಯ ನಟ ಕೃಷ್ಣಂ ರಾಜು ಮತ್ತು ಚಿಕ್ಕಮ್ಮ ಸಹ ಹಾಜರಿದ್ದರು.

ನವದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನೆಸಿರುವ ಪ್ರಭಾಸ್, ತಾವು ಅಭಿನಯಿಸಿರುವ 'ಬಾಹುಬಲಿ' ಚಿತ್ರ ವೀಕ್ಷಿಸುವಂತೆ ಪ್ರಧಾನಿಗೆ ಆಹ್ವಾನ ನೀಡಿದ್ದಾರೆ. ಪ್ರಭಾಸ್ ಕೋರಿಕೆಗೆ ಸ್ಪಂದಿಸಿರುವ ಪ್ರಧಾನಿ ತಮಗೆ ಅಧಿಕ ಕಾರ್ಯದೊತ್ತಡವಿದ್ದು, ಬಿಡುವು ಮಾಡಿಕೊಂಡು ಚಿತ್ರವನ್ನು ವೀಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
 
ಪ್ರಭಾಸ್ ತಮಗೆ ಭೇಟಿಯಾಗಿದ್ದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ, ಈ ಕುರಿತ ಫೋಟೋವೊಂದನ್ನು ಸಹ ಪ್ರಕಟಿಸಿದ್ದಾರೆ. 
 
ಪ್ರಧಾನಿ ಮೋದಿಯವರೊಂದಿಗಿನ ತಮ್ಮ ಭೇಟಿ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಭಾಸ್, ತಾವು ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗಿನ ಇಂದಿನ ಭೇಟಿ ತಮ್ಮ ಜೀವನದ ಅಮೂಲ್ಯ ಕ್ಷಣ ಎಂದು ಹೇಳಿದ್ದಾರೆ. ಬಹು ಭಾಷಾ ಮಹಾಕಾವ್ಯದಲ್ಲಿ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿರುವ ಪ್ರಭಾಸ್ ಅವರ ಬೆನ್ನು ತಟ್ಟಿ ಮೋದಿ ಅಭಿನಂದಿಸಿದ್ದಾರೆ. 
 
"ವರ್ಷಮ್ " ಖ್ಯಾತಿಯ ನಟ ಸಹ ಪ್ರಧಾನಿ ಜತೆಗಿನ  ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. 
 
ಬಿಡುಗಡೆಗೊಂಡ 15 ದಿನದಲ್ಲಿ 405 ಕೋಟಿ ರೂ. ಗಳಿಸಿರುವ ಬಾಹುಬಲಿ ನೂತನ ದಾಖಲೆ ಬರೆಯುವತ್ತ "ಬಾಹುಬಲಿ' ದಾಪುಗಾಲಿಟ್ಟಿದೆ. ವಿದೇಶಗಳಲ್ಲೂ ಅಬ್ಬರಿಸುತ್ತಿರುವ "ಬಾಹುಬಲಿ' ಅಮೆರಿಕ, ಕೆನಡ, ಬ್ರಿಟನ್‌ನಲ್ಲೂ ಭರ್ಜರಿಯಾಗಿ ಅಬ್ಬರಿಸುತ್ತಿದೆ.

Share this Story:

Follow Webdunia kannada