Select Your Language

Notifications

webdunia
webdunia
webdunia
webdunia

ಮುಂದಿನ ತಿಂಗಳು ಮೋದಿ ಮಂತ್ರಿಮಂಡಲ ವಿಸ್ತರಣೆ ಸಾಧ್ಯತೆ, ರಾಜ್ಯದ ಸಂಸದರಿಗೆ ಸಚಿವಯೋಗ?

ಮುಂದಿನ ತಿಂಗಳು ಮೋದಿ ಮಂತ್ರಿಮಂಡಲ ವಿಸ್ತರಣೆ ಸಾಧ್ಯತೆ, ರಾಜ್ಯದ ಸಂಸದರಿಗೆ ಸಚಿವಯೋಗ?
ನವದೆಹಲಿ , ಸೋಮವಾರ, 28 ಜುಲೈ 2014 (17:11 IST)
ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳ ಮಧ್ಯಂತರದಲ್ಲಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಬರುವ ತಿಂಗಳ ಅಗಸ್ಟ್ 14 ಕ್ಕೆ ಸಂಸತ್ ಅಧಿವೇಶನಗಳು ಕೊನೆಗೊಳ್ಳಲಿದ್ದು, ಅನಂತರ ಮೋದಿ ಸಂಪುಟದ ಗಾತ್ರವನ್ನು ಹೆಚ್ಚಿಸಲಿದ್ದಾರೆ. ಹೆಚ್ಚು ಕಡಿಮೆ ಒಂದು ಡಜನ್ ಹೊಸ ಮಂತ್ರಿಗಳನ್ನು ಸೇರಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. 
 
ಈ ಸಂದರ್ಭದಲ್ಲಿ ಮೋದಿಯವರು ಎಲ್ಲ ರಾಜ್ಯಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯ  ಮತ್ತು ಸಾಮರ್ಥ್ಯದ ಅಂಶಗಳ ಮೇಲೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 
 
ಪ್ರಸ್ತುತ ಮೋದಿ ಮಂತ್ರಿ ಮಂಡಲದಲ್ಲಿ  44 ಕ್ಯಾಬಿನೇಟ್ ದರ್ಜೆಯ ಮತ್ತು 22 ರಾಜ್ಯ ಮಂತ್ರಿಗಳಿದ್ದಾರೆ. 
 
ಮೋದಿ ಸಚಿವ ಸಂಪುಟದಲ್ಲಿ ಕಾಣಿಸಿಕೊಳ್ಳಲಿರುವ ಹೊಸ ಮುಖಗಳಲ್ಲಿ ಹಜಾರಿಬಾಗ್ ಸಂಸದ, ಮಾಜಿ ಹಣಕಾಸು ಮಂತ್ರಿ ಯಶವಂತ್ ಸಿನ್ಹಾರವರ ಪುತ್ರ ಜಯಂತ್ ಸಿನ್ಹಾ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಲ್ಲದೇ ಬಿಜೆಪಿ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಅಮಿತ್ ಶಾರವರ ಹಿಂದೆ ಇದ್ದ ಜೆಪಿ ನಡ್ಡಾರವರಿಗೆ ಕೂಡಾ ಸಚಿವ ಪದವಿ ದೊರಕುವ ಅವಕಾಶಗಳಿವೆ ಎಂದು ಮಾಹಿತಿ ಲಭಿಸಿದೆ. 
 
 ಹಿರಿಯ ಮಂತ್ರಿಗಳ ಖಾತೆಗಳನ್ನು ಮೋದಿಯವರು ಬದಲಾವಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು,  ಎರಡು, ಮೂರು ಸಚಿವಾಲಯಗಳನ್ನು ನೋಡಿಕೊಳ್ಳುತ್ತಿರುವ ಮಂತ್ರಿಗಳ ಹೊರೆಯನ್ನು ಕಡಿಮೆಗೊಳಿಸಲಿದ್ದಾರೆ.
 
ಕೆಲವು ಖಾತೆಗಳನ್ನು ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಅಪ್ನಾ ದಳದವರಿಗೂ ಹಂಚುವ ಸಂಭವನೀಯತೆ ಇದೆ. 

Share this Story:

Follow Webdunia kannada