Select Your Language

Notifications

webdunia
webdunia
webdunia
webdunia

ನಿವೃತ್ತಿಯಾಗುತ್ತಿರುವ ಸೇನಾ ಮುಖ್ಯಸ್ಥನಿಗೆ ವಿದಾಯದ ಊಟ ಆಯೋಜಿಸಿದ ಮೋದಿ

ನಿವೃತ್ತಿಯಾಗುತ್ತಿರುವ ಸೇನಾ ಮುಖ್ಯಸ್ಥನಿಗೆ ವಿದಾಯದ ಊಟ ಆಯೋಜಿಸಿದ ಮೋದಿ
ನವದೆಹಲಿ , ಭಾನುವಾರ, 27 ಜುಲೈ 2014 (11:42 IST)
ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಯಾಗುತ್ತಿರುವ ಜನರಲ್ ಬಿಕ್ರಂ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಶನಿವಾರ ವಿದಾಯದ ಔತಣಕೂಟವನ್ನು ಆಯೋಜಿಸಿದ್ದರು. 

ಸಿಂಗ್ ಅವರ ಪತ್ನಿ ಬಬ್ಬಲ್ ಸಿಂಗ್, ಗೃಹ ಸಚಿವರಾದ ರಾಜನಾಥ್ ಸಿಂಗ್, ರಕ್ಷಣಾ ಮಂತ್ರಿ ಅರುಣ್ ಜೆಟ್ಲಿ, ರಕ್ಷಣಾ ರಾಜ್ಯ ಮಂತ್ರಿ ಇಂದ್ರಜಿತ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹಾಗಾರರಾದ ಅಜಿತ್ ದೋವಲ್ ಮತ್ತು ಸರಕಾರದ ಹಿರಿಯ ಅಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದರು ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. 
 
ಜುಲೈ 31 ರಂದು ಜನರಲ್ ಬಿಕ್ರಂ ಸಿಂಗ್  ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದು, ಅವರ ಸ್ಥಾನಕ್ಕೆ  ಲಿಫ್ಟಿನೆಂಟ್ ಜನರಲ್ ದಲಬೀರ್ ಸಿಂಗ್ ಸುಹಾಗ್ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. 

Share this Story:

Follow Webdunia kannada