ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ಮೋದಿ, ತಮ್ಮೊಂದಿಗೆ ಟಿಫಿನ್ ಬಾಕ್ಸ್ ತಂದಿರುವುದು ಎಲ್ಲರ ಗಮನ ಸೆಳೆಯುತು.
ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಮೌರ್ಯ ಸೇರಿದಂತೆ ಇತರ ಬಿಜೆಪಿ ನಾಯಕರೊಂದಿಗೆ ಪ್ರಧಾನಿ ಮೋದಿ ಭೋಜನ ಸೇವಿಸುತ್ತಿರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ, ಇಂತಹ ಸಮಾನತೆ ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸಭೆಗೆ ಆಗಮಿಸಿದ್ದ ಪ್ರತಿಯೊಬ್ಬರು ತಮ್ಮ ಊಟವನ್ನು ತಾವೇ ತಂದಿರುವುದು ವಿಶೇಷವಾಗಿತ್ತು. ನಗರದ 1700 ಬೂತ್ಗಳ 26 ಸಾವಿರ ಬೂತ್ ಕಾರ್ಯಕರ್ತರೊಂದಿಗೆ ಭೋಜನ ಸೇವಿಸಿರುವುದು ಬಿಜೆಪಿ ಪಾಲಿಗೆ ಹೊಸ ಬಲವನ್ನು ತಂದುಕೊಟ್ಟಂತಾಗಿದೆ.
ಇದಕ್ಕಿಂತ ಮೊದಲು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೂಕಂಪ ಹೇಳಿಕೆ ಕುರಿತಂತೆ ಲೇವಡಿ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.