Select Your Language

Notifications

webdunia
webdunia
webdunia
webdunia

ಪಿಎಂ ಮೋದಿ, ಮಮತಾ ಬ್ಯಾನರ್ಜಿ ಸರ್ವಾಧಿಕಾರಿಗಳು: ಜೈರಾಮ್ ರಮೇಶ್

ಪಿಎಂ ಮೋದಿ, ಮಮತಾ ಬ್ಯಾನರ್ಜಿ ಸರ್ವಾಧಿಕಾರಿಗಳು: ಜೈರಾಮ್  ರಮೇಶ್
ಕೋಲ್ಕತಾ , ಸೋಮವಾರ, 25 ಮೇ 2015 (15:40 IST)
ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೇಲೆ ಕಾಂಗ್ರೆಸ್ ನೇತಾರ ಜೈರಾಮ್ ರಮೇಶ್ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ. 'ಮೋದಿ ಮತ್ತು ಮಮತಾ ಸರ್ವಾಧಿಕಾರಿಗಳಾಗಿದ್ದು ಒಂದೇ ನಾಣ್ಯದ ಎರಡು ಮುಖಗಳಂತಿದ್ದಾರೆ. ಅವರಿಬ್ಬರ ನಡುವೆ ರಹಸ್ಯ ಒಪ್ಪಂದವಾಗಿದೆ', ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ. 

 
ಎನ್‌ಡಿಎ ಸರಕಾರದ ವರ್ಷದ ಸಾಧನೆಗಳ ಕುರಿತು ಪ್ರಚಾರ ಮಾಡುವ ನೇತೃತ್ವ ವಹಿಸಿಕೊಂಡಿರುವ ಅರುಣ್ ಜೇಟ್ಲಿ ಅವರನ್ನು ಸಹ ಗುರಿಯಾಗಿಸಿರುವ ರಮೇಶ್, "ಭಾರತದ ರಾಜಕಾರಣದಲ್ಲಿ ಕೇಂದ್ರ ಹಣಕಾಸು ಸಚಿವರು ಅತ್ಯಂತ ಪರಿಣಾಮಕಾರಿ ಸ್ಪಿನ್ನರ್", ಎಂದು ವ್ಯಂಗ್ಯವಾಡಿದರು. 
 
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಮೇಶ್, "ಪಿಎಂ ಮೋದಿ ಮತ್ತು ಕುಮಾರಿ ಮಮತಾ ಬ್ಯಾನರ್ಜಿ  ಪರಸ್ಪರ ವಿಶ್ವಾಸಾರ್ಹ ಸ್ನೇಹಿತರು. ಇಬ್ಬರ ಲಕ್ಷಣಗಳು ಸಹ ಹೋಲಿಕೆಯಾಗುತ್ತಿವೆ. ಅಧಿಕಾರಕ್ಕೆ ಏರಿದ ಸಂದರ್ಭದಲ್ಲಿ  ಪ್ರಧಾನಿಯವರು ಗರಿಷ್ಠ ಆಡಳಿತ ಮತ್ತು ಕನಿಷ್ಠ ಸರ್ಕಾರ ಎಂಬ ಮಾತುಗಳನ್ನು ಆಡಿದ್ದರು. ಆದರೆ ಒಂದು ವರ್ಷದೊಳಗೆ ನಾವು ಗರಿಷ್ಠ ಅಹಂಕಾರ ಮತ್ತು ಏಕವ್ಯಕ್ತಿ ಸರ್ಕಾರವನ್ನು ಕಂಡೆವು.  ಇದು ಪಶ್ಚಿಮ ಬಂಗಾಳದಲ್ಲಿನ ಸನ್ನಿವೇಶದ ಪ್ರತಿಬಿಂಬ. ಹೀಗಾಗಿ ಅವರಿಬ್ಬರು ಜತೆಯಾಗಿದ್ದಾರೆ", ಎಂದು ಕಿಡಿಕಾರಿದ್ದಾರೆ. 
 
"ಪ್ರಧಾನಿ ಮೋದಿ ಮತ್ತು ಮಮತಾ ಬ್ಯಾನರ್ಜಿ 2014 ರ ಲೋಕಸಭಾ ಚುನಾವಣೆಯಲ್ಲಿ ಪರಸ್ಪರರ ವಿರುದ್ಧ ತೀವೃ ವಾಗ್ದಾಳಿ ನಡೆಸಿರಲಿಲ್ಲ ಮತ್ತು ಇತ್ತೀಚಿನವರೆಗೂ ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡಿರಲಿಲ್ಲ. ಆದರೆ ಅವರ ನಡುವೆ ರಹಸ್ಯ ಒಪ್ಪಂದ ನಡೆದಿದೆ", ಎಂದು ರಮೇಶ್ ಹೇಳಿದ್ದಾರೆ. 

Share this Story:

Follow Webdunia kannada