Select Your Language

Notifications

webdunia
webdunia
webdunia
webdunia

ಲತಾ ಜನ್ಮದಿನಕ್ಕೆ ಮೋದಿ ಶುಭಾಶಯ

ಲತಾ ಜನ್ಮದಿನಕ್ಕೆ ಮೋದಿ ಶುಭಾಶಯ
ನವದೆಹಲಿ , ಸೋಮವಾರ, 29 ಸೆಪ್ಟಂಬರ್ 2014 (08:48 IST)
ಮಧುರ ಕಂಠದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ 85ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶುಭಾಶಯ ಕೋರಿದ್ದಾರೆ. 

"ಲತಾ ದಿದಿ ಅವರ ಜನ್ಮದಿನಕ್ಕೆ ನನ್ನ ಹೃದಯ ಪೂರ್ವಕ ಹಾರೈಕೆಗಳು. ಅವರ ಉತ್ತಮ ಆರೋಗ್ಯಕ್ಕೆ ಮತ್ತು ದೀರ್ಘ ಬದುಕಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ಟ್ವಿಟ್ ಮಾಡಿದ್ದಾರೆ. 
 
ಲತಾ ಸಹೋದರಿ ಆಶಾ ಭೋಂಸ್ಲೆ, ಖ್ಯಾತ ನಟ ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ, ಗಾಯಕಿ ಶ್ರೇಯ ಘೋಷಾಲ್ ಸೇರಿದಂತೆ  ಸಿನಿಮಾ ರಂಗದ ಅನೇಕ ಗಣ್ಯರು ಲತಾ ಜನ್ಮದಿನಕ್ಕೆ ಶುಭಾಶಯ ಕೋರಿದ್ದು ಸ್ಮರಣೀಯ ಹಾಡುಗಳನ್ನು ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 
 
"ನಿಮ್ಮ ಸ್ವರ, ಜೀವವನ್ನು ದೇವನೊಂದಿಗೆ ಬೆಸೆಯುವ  ದಾರ. ಜನ್ಮದಿನದ ಶುಭಾಶಯಗಳು, ನಿಮಗೆ ನನ್ನ ಕಡೆಯಿಂದ ಪ್ರೀತಿ, ಗೌರವ ಮತ್ತು ನೀವು ಹಲವಾರು ವರ್ಷಗಳ ಕಾಲ ಬದುಕಿ ಬಾಳಿರಿ " ಎಂದು ಬಚ್ಚನ್ ಪೋಸ್ಟ್ ಮಾಡಿದ್ದಾರೆ. 
 
ಲತಾ ಸಹೋದರಿ ಆಶಾ ತಮ್ಮಿಬ್ಬರ ಬಾಲ್ಯದ ಕೆಲವು ಕಪ್ಪು ಮತ್ತು ಬಿಳಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada