Select Your Language

Notifications

webdunia
webdunia
webdunia
webdunia

13 ರಂದು ಪ್ರಧಾನಿ ಮೋದಿ ಬೆಳಗಾವಿಗೆ?

13 ರಂದು ಪ್ರಧಾನಿ ಮೋದಿ ಬೆಳಗಾವಿಗೆ?
ಬೆಳಗಾವಿ , ಸೋಮವಾರ, 7 ನವೆಂಬರ್ 2016 (10:26 IST)
ಬೆಳಗಾವಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ(ಕೆಎಲ್ಇ)ಯ ಶತಮಾನೋತ್ಸದ ವರ್ಣರಂಜಿತ ಕಾರ್ಯಕ್ರಮ ಪ್ರಧಾನಿ ಮೋದಿ ಅವರಿಂದ ನ. 13 ರಂದು ಉದ್ಘಾಟನೆಗೊಳ್ಳಲಿದೆ.
ಐತಿಹಾಸಿಕ ಕ್ರಾಂತಿಯ ನೆಲದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕೆಎಲ್ಇ ಎಂದು ಖ್ಯಾತಿ ಪಡೆದಿದೆ. ಈ ಸಂಸ್ಥೆ ಜನ್ಮ ತಳೆದು ನೂರು ವರ್ಷಗಳನ್ನು ಪೂರೈಸಿದ್ದು ಒಂದು ಅಚ್ಚಳಿಯದ ಮೈಲಿಗಲ್ಲು. ಶತಮಾನೋತ್ಸವದ ಕಾರ್ಯಕ್ರಮ ಐತಿಹ್ಯವಾಗಬೇಕೆನ್ಬುವ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ತಾವೇ ಖುದ್ದಾಗಿ ಪ್ರಧಾನಿಯನ್ನು ಭೇಟಿ ಮಾಡಿ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಪ್ರಧಾನಿ ಮೋದಿ ಬರುವುದಾಗಿಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ.
 
ಹಳ್ಳಿಯಿಂದ ದಿಲ್ಲಿಯವರೆಗೆ, ದಿಲ್ಲಿಯಿಂದ ದುಬೈವರೆಗೆ ನೂರಾರು ಶಾಖೆಗಳನ್ನು ತೆರೆದು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ಹೆಮ್ಮೆಯ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ: ಪೊಲೀಸ್ ಅಧಿಕಾರಿ ಸಭೆಯಲ್ಲಿ ಸಿದ್ದರಾಮಯ್ಯ ಏನಂದ್ರು?