Webdunia - Bharat's app for daily news and videos

Install App

ಇಂಡಿಯಾ ಬ್ಲಾಕ್ ಗೆ ವರ್ಷಕ್ಕೊಬ್ಬ ಪ್ರಧಾನಿ: ನರೇಂದ್ರ ಮೋದಿ ಲೇವಡಿ

Krishnaveni K
ಗುರುವಾರ, 25 ಏಪ್ರಿಲ್ 2024 (11:19 IST)
ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸೋಲಿಸಬೇಕೆಂದು ವಿಪಕ್ಷಗಳು ಸ್ಥಾಪಿಸಿರುವ ಇಂಡಿಯಾ ಒಕ್ಕೂಟದ ಬಗ್ಗೆ ಪ್ರಧಾನಿ ಮೋದಿ ಮತ್ತೊಮ್ಮೆ ವ್ಯಂಗ್ಯ ಮಾಡಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಇಂಡಿಯಾ ಎಂಬ ಒಕ್ಕೂಟ ಸ್ಥಾಪಿಸಿ ಒಟ್ಟಾಗಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ವ್ಯಂಗ್ಯ ಮಾಡಿದ್ದಾರೆ.

‘ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ದೇಶದ ಜನತೆ ತಿಳಿದುಕೊಳ್ಳಬೇಕು. ನಮ್ಮ ಕಡೆಯಿಂದ ನಿಮ್ಮ ಎದುರಿಗೆ ಮೋದಿ ಎಂಬ ನಾನು 10 ವರ್ಷದ ಸಾಧನೆಯೊಂದಿಗೆ ನಿಂತಿದ್ದೇನೆ. ವಿಪಕ್ಷಗಳೂ ಪ್ರಧಾನಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದವು. ಆದರೆ ಸಿಗಲಿಲ್ಲ. ಇದೀಗ ಕೆಲವು ಮಾಧ್ಯಮ ವರದಿ ಪ್ರಕಾರ ಅವರು ವರ್ಷಕ್ಕೊಬ್ಬ ಪ್ರಧಾನಿ ಎಂಬಂತೆ ಐದು ವರ್ಷಕ್ಕೆ ಐವರು ಪ್ರಧಾನಿ ಅಭ್ಯರ್ಥಿಗಳನ್ನು ಕಂಡುಕೊಳ್ಳಲಿದ್ದಾರಂತೆ. ಹೀಗೇ ಆದರೆ ದೇಶದ ಗತಿ ಏನಾಗಬಹುದು?’ ಎಂದು ಮೋದಿ ಲೇವಡಿ ಮಾಡಿದ್ದಾರೆ.

‘ಅದರ ಅರ್ಥ ಅವರು ಈಗ ಪ್ರಧಾನಿ ಹುದ್ದೆಯನ್ನು ಹರಾಜಿಗಿಟ್ಟಿದ್ದಾರೆ. ಮೊದಲು ಒಬ್ಬ ಅಧಿಕಾರಕ್ಕೇರುತ್ತಾನೆ, ಉಳಿದ ನಾಲ್ವರು ತಮ್ಮ ಸರದಿಗಾಗಿ ಕಾಯುತ್ತಾರೆ. ಇದು ಹಗಲುಗನಸು ಎನಿಸುತ್ತದೆ, ಆದರೆ ಇದು ತಮಾಷೆಯ ವಿಷಯವಲ್ಲ. ಇಂತಹ ವಿಚಾರಗಳು ದೇಶವನ್ನು ಒಡೆಯಲಿದೆ. ನಿಮ್ಮ ಕನಸುಗಳನ್ನೂ ಚೂರು ಮಾಡಲಿದೆ’ ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments