Webdunia - Bharat's app for daily news and videos

Install App

PM Modi: ಪ್ರಧಾನಿ ಮೋದಿ ಭಾಷಣ ಕನ್ನಡದಲ್ಲಿ ಸಂಪೂರ್ಣವಾಗಿ ಇಲ್ಲಿದೆ ನೋಡಿ

Krishnaveni K
ಸೋಮವಾರ, 12 ಮೇ 2025 (20:23 IST)
Photo Credit: X
ನಮಸ್ಕಾರ ನಾನು ಮೊದಲು ಭಾರತದ ಪರಾಕ್ರಮಿ ಸೇನೆಗೆ, ಸಶಸ್ತ್ರ ಬಲಕ್ಕೆ, ನಮ್ಮ ಭದ್ರತಾ ಪಡೆಗಳಿಗೆ, ನಮ್ಮ ವಿಜ್ಞಾನಿಗಳಿಗೆ ಎಲ್ಲಾ ಭಾರತೀಯ ಪರವಾಗಿ ಸೆಲ್ಯೂಟ್ ಮಾಡುತ್ತೇನೆ. ನಮ್ಮ ವೀರ ಸೈನಿಕರು ಆಪರೇಷನ್ ಸಿಂಧೂರ್ ಗುರಿಯನ್ನು ಪ್ರಾಪ್ತಿ ಮಾಡಲು ಅಸಮಾನ್ಯ ಶೌರ್ಯ ಪ್ರದರ್ಶನ ಮಾಡಿದರು. ನಾನು ಅವರ ವೀರತ್ವ, ಸಾಹಸ, ಪರಾಕ್ರಮಕ್ಕೆ ಇಂದಿನ ದಿನವನ್ನು ಸಮರ್ಪಿಸುತ್ತಿದ್ದೇನೆ.

ನಮ್ಮ ಪ್ರತೀ ತಾಯಿ, ಪ್ರತೀ ಸಹೋದರಿ ಮತ್ತು ದೇಶದ ಪ್ರತಿಯೊಬ್ಬ ಮಗಳಿಗೂ ಸಮರ್ಪಣೆ ಮಾಡುತ್ತೇನೆ. 22 ಏಪ್ರಿಲ್ ರನ್ನು ಪಹಲ್ಗಾಮ್ ನಲ್ಲಿ ಉಗ್ರರು ತಮ್ಮ ಹೀನ ಕೃತ್ಯ ಮಾಡಿದರು. ಇದಕ್ಕೆ ಇಡೀ ದೇಶವೇ ಆಕ್ರೋಶಗೊಂಡಿತು. ಪ್ರವಾಸ ಎಂಜಾಯ್ ಮಾಡುತ್ತಿದ್ದ ಕುಟುಂಬದವರನ್ನು ಅವರ ಪತ್ನಿಯರು, ಮಕ್ಕಳ ಎದುರು ಧರ್ಮ ಕೇಳಿ ಕೊಂದರು. ಇದು ಭೀಕರವಾದದ ಅತ್ಯಂತ ಹೇಯ, ಭೀಭತ್ಸ ಕೃತ್ಯವಾಗಿತ್ತು. ಇದು ದೇಶದ ಸದ್ಭಾವನೆಯನ್ನು ಮುರಿಯುವ ಯತ್ನವಾಗಿತ್ತು. ನನ್ನ ಪಾಲಿಗೆ ಇದು ವೈಯಕ್ತಿಕವಾಗಿ ಈ ಹಿಂಸೆ ಅತ್ಯಂತ ದೊಡ್ಡದಾಗಿತ್ತು. ಈ ಉಗ್ರ ದಾಳಿಯ ನಂತರ ಇಡೀ ದೇಶವೇ ಏಕಸ್ವರದಲ್ಲಿ ಉಗ್ರವಾದದ ವಿರುದ್ಧ ಖಡಕ್ ಕ್ರಮಕ್ಕೆ ಎದ್ದು ನಿಂತಿತು. ನಾವು ಉಗ್ರಗಾಮಿಗಳನ್ನು ಮಣ್ಣು ಮುಕ್ಕಿಸಲು ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದೆವು. ಇಂದು ಎಲ್ಲಾ ಉಗ್ರರು, ಉಗ್ರ ಸಂಘಟನೆಗಳು ನಮ್ಮ ಸಹೋದರಿಯರ ಹಣೆಯಿಂದ ಸಿಂದೂರ ತೆಗೆದರೆ ಪರಿಣಾಮವೇನೆಂದು ತಿಳಿದುಕೊಂಡಿದ್ದಾರೆ. ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಇದು ದೇಶದ ಕೋಟಿ ಕೋಟಿ ಜನರ ಭಾವನೆಯ ಪ್ರತಿಬಿಂಬವಾಗಿದೆ. ಆಪರೇಷನ್ ಸಿಂದೂರ್ ನ್ಯಾಯದ ಅಖಂಡ ಪ್ರತಿಜ್ಞೆಯಾಗಿದೆ. 6 ಮಾರ್ಚ್ ರ ರಾತ್ರಿ, 7 ಮಾರ್ಚ್ ಬೆಳಿಗ್ಗೆ ಇಡೀ ವಿಶ್ವವೇ ಈ ಪ್ರತಿಜ್ಞೆಯ ಪ್ರತಿಫಲವನ್ನು ನೋಡಿದವು. ಉಗ್ರರ ಅಡಗುದಾಣಗಳ ಮೇಲೆ ತಕ್ಕ ಪ್ರಹಾರ ನಡೆಸಿದೆವು. ಉಗ್ರರು ಕನಸಿನಲ್ಲೂ ಭಾರತ ಇಷ್ಟು ದೊಡ್ಡ ನಿರ್ಧಾರ ಮಾಡುತ್ತದೆ ಎಂದು ಅಂದುಕೊಂಡಿರಲಿಲ್ಲ.

ಪಾಕಿಸ್ತಾನದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಭಾರತದ ಮಿಸೈಲ್ ಗಳು ಅಪ್ಪಳಿಸಿದವು, ಭಾರತದ ಡ್ರೋಣ್ ಗಳು ಅಪ್ಪಳಿಸಿದವು ಉಗ್ರ ಸಂಘಟನೆಗಳು ಮಾತ್ರವಲ್ಲ, ಅವರ ದುಸ್ಸಾಹಸವೂ ಮುರಿದುಬಿತ್ತು. ವಿಶ್ವದ ಯಾವುದೇ ಭಾಗದಲ್ಲಿ ದಾಳಿಯಾಗಿತ್ತೋ ಎಲ್ಲಾ ಕಡೆ ಒಂದಲ್ಲಾ ಒಂದು ರೀತಿಯಲ್ಲಿ ಆತಂಕವಾದಿಗಳ ಹೆಸರು ಜೋಡಿಕೊಂಡಿತ್ತು. ಉಗ್ರರು ನಮ್ಮ ಸಹೋದರಿಯರ ಸಿಂದೂರವನ್ನು ಅಳಿಸಿದ್ದರು. ಅದಕ್ಕೇ ಭಾರತವು ಉಗ್ರರ ಹೆಡ್ ಕ್ವಾರ್ಟರ್ಸ್ ನ್ನೇ ಉಡಾಯಿಸಿತು.

ಭಾರತದ ದಾಳಿಗೆ ನೂರಾರು ಉಗ್ರರು ಪ್ರಾಣ ಕಳೆದುಕೊಂಡರು. ಹಲವು ಉಗ್ರರು ಪಾಕಿಸ್ತಾನದಲ್ಲೇ ಆರಾಮವಾಗಿ ತಿರುಗಾಡಿಕೊಂಡಿದ್ದರು. ಅವರನ್ನು ಭಾರತ ಒಂದೇ ಏಟಿಗೆ ಮುಗಿಸಿತು. ಭಾರತದ ಈ ಕಾರ್ಯಕ್ಕೆ ಪಾಕಿಸ್ತಾನ ಘೋರ ನಿರಾಶೆಗೊಳಗಾಯಿತು. ಹತಾಶೆಗೊಳಗಾಯಿತು. ಇದೇ ಕಾರಣಕ್ಕೆ ಇನ್ನೊಂದು ದುಸ್ಸಾಹಸ ಮಾಡಿತು.

ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಭಾರತಕ್ಕೆ ನೆರವು ನೀಡುವ ಬದಲು ಭಾರತದ ಮೇಲೆಯೇ ದಾಳಿ ಮಾಡಲು ಆರಂಭಿಸಿತು. ನಮ್ಮ ಶಾಲೆ, ಕಾಲೇಜು, ಗುರುದ್ವಾರ, ಮಂದಿರಗಳು, ಸಾಮಾನ್ಯ ನಾಗರಿಕ ಮನೆಗಳ ಮೇಲೆ ಪಾಕಿಸ್ತಾನ ಗುರಿಯಾಗಿಸಿತು. ಪಾಕಿಸ್ತಾನ ನಮ್ಮ ಸೈನಿಕರನ್ನು ಗುರಿಯಾಗಿರಿಸಿತು. ಆದರೆ ಇದರಲ್ಲೂ ಪಾಕಿಸ್ತಾನ ಸೋತು ನೆಲಕಚ್ಚಿತು.

ವಿಶ್ವವೇ ನೋಡಿದೆ, ಪಾಕಿಸ್ತಾನದ ಡ್ರೋಣ್ ಗಳು, ಮಿಸೈಲ್ ಗಳು ಭಾರತದ ಮುಂದೆ ಹೇಗೆ ನೆಲಕಚ್ಚಿವೆ ಎಂದು. ಭಾರತದ ಸಶಕ್ತ ಏರ್ ಡಿಫೆನ್ಸ್ ಸಿಸ್ಟಂ ಅವುಗಳನ್ನು ಆಕಾಶದಲ್ಲೇ ನಾಶ ಮಾಡಿತು. ಪಾಕಿಸ್ತಾನದ ತಯಾರಿ ಗಡಿಯಲ್ಲಿ ಯುದ್ಧವಾಗಿತ್ತು. ಆದರೆ ಭಾರತ, ಪಾಕಿಸ್ತಾನದ ಗಡಿಯಲ್ಲೇ ಹೊಡೆದುರುಳಿಸಿತು.

ಪಾಕಿಸ್ತಾನದ ವಾಯುಸೇನೆಯ ಏರ್ ಬೇಸ್ ಗೆ ದಾಳಿ ಮಾಡಿತು. ಇದರ ಮೇಲೆ ಪಾಕಿಸ್ತಾನಕ್ಕೆ ಭಾರೀ ನಂಬಿಕೆಯಿತ್ತು. ಭಾರತ ಮೂರು ದಿನ ಮೊದಲೇ ಪಾಕಿಸ್ತಾನದ ಮೇಲೆ ಎಂಥಾ ಏಟು ಕೊಟ್ಟಿದೆ ಎಂದರೆ ಅದರ ಬಗ್ಗೆ ಅವರಿಗೆ ಕಲ್ಪನೆಯೂ ಇರಲಿಲ್ಲ.

ಪಾಕಿಸ್ತಾನ ವಿಶ್ವದಾದ್ಯಂತ ತನ್ನ ಮೇಲಿನ ದಾಳಿ ತಡೆಯಲು ಅಂಗಲಾಚಿತು. ಇದೇ ತುರ್ತಿನಿಂದಾಗಿ 10 ನೇ ಮಾರ್ಚ್ ಅಪರಾಹ್ನ ಪಾಕಿಸ್ತಾನದ ಸೇನಾಧಿಕಾರಿಗಳು ನಮ್ಮ ಡಿಜಿಒಗಳನ್ನು ಸಂಪರ್ಕಿಸಿದರು.

ಅಷ್ಟರಲ್ಲಿ ನಾವು ಉಗ್ರರ ಅಡಗುದಾಣಗಳನ್ನು ನಾಶ ಮಾಡಿದ್ದೆವು. ಪಾಕಿಸ್ತಾನದ ಗಡಿಯಲ್ಲಿ ಉಗ್ರರ ಅಡಗುದಾಣಗಳನ್ನು ಛಿದ್ರ ಮಾಡಿದ್ದೆವು. ಇದೇ ಕಾರಣಕ್ಕೆ ಪಾಕಿಸ್ತಾನದ ಕಡೆಯಿಂದ ಮುಂದಿನ ದಿನಗಳಲ್ಲಿ ಯಾವುದೇ ಉಗ್ರ ದಾಳಿ ಅಥವಾ ಪಾಕಿಸ್ತಾನದ ಸೈನ್ಯದ ಕಡೆಯಿಂದ ದಾಳಿಯಾಗಲ್ಲ ಎಂದಿತು. ಅದಕ್ಕೇ ನಾವು ನಮ್ಮ ಸೈನ್ಯದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ನಮ್ಮ ನಡೆ ಇರಲಿದೆ.

ನಮ್ಮ ಮೂರೂ ಸೇನೆಗಳು ನಮ್ಮ ಗಡಿ ಭದ್ರತಾ ಪಡೆಗಳು ಭಾರತದ ಅರೆಸೇನಾ ಪಡೆ ಎಚ್ಚರಿಕೆಯಿಂದಿವೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಳಿಕ ಈಗ ಆಪರೇಷನ್ ಸಿಂಧೂರ್ ಉಗ್ರರ ವಿರುದ್ಧ ಭಾರತದ ನೀತಿಯಾಗಿರಲಿದೆ. ಆಪರೇಷನ್ ಸಿಂಧೂರ್ ಉಗ್ರರ ವಿರುದ್ಧ ಹೋರಾಟಕ್ಕೆ ಹೊಸ ದಾರಿ ಮಾಡಿಕೊಟ್ಟಿದೆ.

ಮುಂದೆ ಏನಾದರೂ ಭಾರತದ ಮೇಲೆ ಉಗ್ರರಿಂದ ದಾಳಿಯಾಯಿತೋ ನಮ್ಮದೇ ರೀತಿಯಲ್ಲಿ ತಕ್ಕ ಉತ್ತರ ನೀಡಲಿದ್ದೇವೆ. ಯಾವುದೇ ಜಾಗಕ್ಕೆ ಹೋಗಿಯಾದರೂ ಸೈ ಉಗ್ರರನ್ನು ದಮನಿಸಲಿದ್ದೇವೆ. ಯಾವುದೇ ನ್ಯೂಕ್ಲಿಯರ್ ಬ್ಲ್ಯಾಕ್ ಮೇಲ್ ನಾವು ಸಹಿಸಲ್ಲ.

ಮೂರನೆಯದಾಗಿ ನಾವು ಉಗ್ರರನ್ನು ಬೆಂಬಲಿಸುವ ಸರ್ಕಾರ, ಉಗ್ರರನ್ನು ಪ್ರತ್ಯೇಕವಾಗಿ ನೋಡಲ್ಲ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ತಾನದ ನೈಜ ಮುಖವನ್ನು ಇಡೀ ವಿಶ್ವವೇ ನೋಡಿದೆ. ಸತ್ತ ಉಗ್ರರಿಗೆ ವಿದಾಯ ನೀಡಲು ಪಾಕಿಸ್ತಾನದ ದೊಡ್ಡ ದೊಡ್ಡ ಸೇನಾಧಿಕಾರಿಗಳು ಬಂದಿದ್ದರು. ಅಲ್ಲಿನ ಸರ್ಕಾರವೇ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.

ನಾವು ನಮ್ಮ ನಾಗರಿಕರನ್ನು ಯಾವುದೇ ಸಮಸ್ಯೆಯಿಂದ ಕಾಪಾಡಲು ನಿಯಮಿತವಾಗಿ ಇಂತಹ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ. ಈ ಬಾರಿ ಪಾಕಿಸ್ತಾನದ ಜೊತೆ ಯುದ್ಧ ಆಪರೇಷನ್ ಸಿಂಧೂರ್ ಹೊಸ ಆಯಾಮ ನೀಡಿದೆ. ಈ ಆಪರೇಷನ್ ಸಂದರ್ಭದಲ್ಲಿ ನಮ್ಮ ಮೇಡ್ ಇನ್ ಇಂಡಿಯಾ ಯುದ್ಧ ಪರಿಕರಗಳ ಸಾಮರ್ಥ್ಯ ಸಾಬೀತಾಗಿದೆ.

ಎಲ್ಲಾ ರೀತಿಯ ಉಗ್ರವಾದದ ವಿರುದ್ಧ ನಾವೆಲ್ಲರೂ ಏಕತೆಯಿಂದ ಇರುವುದು ಮುಖ್ಯ. ಇದುವೇ ನಮ್ಮ ಶಕ್ತಿ. ನಿಶ್ಚಿತವಾಗಿ ಇದು ಯುದ್ಧದ ಯುಗವಲ್ಲ. ಆದರೆ ಈ ಯುಗ ಉಗ್ರವಾದದ ಯುಗವೂ ಅಲ್ಲ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಒಂದು ಅತ್ಯುತ್ತಮ ಜಗತ್ತಿನ ಗ್ಯಾರಂಟಿಯಾಗಿದೆ. ಪಾಕಿಸ್ತಾನದ ಸೇನೆ, ಸರ್ಕಾರ ಯಾವ ರೀತಿ ಉಗ್ರರನ್ನು ಪೋಷಿಸುತ್ತಿದೆಯೋ ಒಂದು ದಿನ ಪಾಕಿಸ್ತಾನವನ್ನೇ ಮುಗಿಸಲಿದೆ. ಪಾಕಿಸ್ತಾನಕ್ಕೆ ಉಳಿದುಕೊಳ್ಳಬೇಕು ಎಂದರೆ ಉಗ್ರರನ್ನು ದಮನಿಸಲೇಬೇಕು. ಇದಕ್ಕೆ ಶಾಂತಿಯ ಹೊರತಾಗಿ ಯಾವುದೇ ದಾರಿಯಿಲ್ಲ.

ಭಾರತದ ಉದ್ದೇಶ ಸ್ಪಷ್ಟವಾಗಿದೆ. ಉಗ್ರವಾದ ಮತ್ತು ಮಾತುಕತೆ ಒಂದೇ ಸಮಯಕ್ಕೆ ಸಾಧ್ಯವಿಲ್ಲ. ಉಗ್ರವಾದ ಮತ್ತು ವ್ಯಾಪಾರ, ನೀರು ಮತ್ತು ರಕ್ತ ಒಂದೇ ಬಾರಿ ಹರಿಸಲು ಸಾಧ್ಯವಿಲ್ಲ.

ನಾನು ವಿಶ್ವಕ್ಕೆ ಹೇಳಲು ಬಯಸುತ್ತೇನೆ, ನಮ್ಮ ಘೋಷಣೆಯಾದ ನೀತಿಯಿದೆ, ಒಂದು ವೇಳೆ ಪಾಕಿಸ್ತಾನದಿಂದ ಮಾತುಕತೆಯಾಗುತ್ತದೆ ಎಂದರೆ ಅದು ಉಗ್ರವಾದದ ಬಗ್ಗೆಯೇ ಇರುತ್ತದೆ, ಪಾಕಿಸ್ತಾನದಿಂದ ಮಾತುಕತೆಯಾಗುತ್ತದೆ ಎಂದರೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ಇರುತ್ತದೆ.

ದೇಶವಾಸಿಗಳೇ ಇಂದು ಬುದ್ಧ ಪೂರ್ಣಿಮೆಯಾಗಿದೆ. ಭಗವಾನ್ ಬುದ್ಧ ಶಾಂತಿ, ನೆಮ್ಮದಿಯ ಮಾರ್ಗ ತೋರಿಸಿದ್ದಾನೆ. ಮಾನವೀಯತೆ, ಶಾಂತಿ ಮತ್ತು ಸಮೃದ್ಧಿಯ ಕಡೆಗೆ, ಪ್ರತಿಯೊಬ್ಬ ಭಾರತೀಯನ ಕನಸೂ ನನಸಾಗಬೇಕು. ಇದಕ್ಕಾಗಿ ಭಾರತ ಶಕ್ತಿಶಾಲಿಯಗಬೇಕು.

ಕಳೆದ ಕೆಲವು ದಿನಗಳಿಂದ ಭಾರತ ಇದನ್ನೇ ಮಾಡುತ್ತಾ ಬಂದಿದೆ. ನಾನು ಇನ್ನೊಮ್ಮೆ ಭಾರತದ ಸೇನೆ, ಸಶಸ್ತ್ರ ಪಡೆಗೆ ಸೆಲ್ಯೂಟ್ ಮಾಡುತ್ತೇನೆ. ದೇಶದ ಪ್ರತಿಯೊಬ್ಬ ನಾಗರಿಕರ ಪರವಾಗಿ ನಮನ ಸಲ್ಲಿಸುತ್ತೇನೆ. ಧನ್ಯವಾದಗಳು. ಭಾರತ್ ಮಾತಾ ಕೀ ಜೈ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ಮೇಲಿನ ದಾಳಿಯನ್ನು ಸಂಭ್ರಮಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಪಾಕ್‌ ಸೇನೆಯನ್ನು ಬಣ್ಣಿಸಿದ್ದು ಹೀಗೇ

Operation Sindoor: 17 ನವಜಾತ ಹೆಣ್ಣು ಮಕ್ಕಳಿಗೆ ಸಿಂಧೂರ್‌ ನಾಮಕರಣ

ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

Karavali Rain: ಬಿಸಿಲ ಬೇಗೆಗೆ ಸುಸ್ತಾಗಿದ್ದ ಮಂದಿಗೆ ಊಹಿಸಲಾಗದ ರೀತಿಯಲ್ಲಿ ಸುರಿದ ಮಳೆ

Pak, India Live: ದಾಳಿ ಬಳಿಕ ಮೊದಲ ಭಾಷಣ ಮಾಡಲಿರುವ ಪ್ರಧಾನಿ ಮೋದಿ, ಹೆಚ್ಚಿದ ಕುತೂಹಲ

ಮುಂದಿನ ಸುದ್ದಿ
Show comments