Webdunia - Bharat's app for daily news and videos

Install App

ಯೋಗಾ ಬದಿಗೊತ್ತಿ ತಾಯಿ ನೋಡಲೋಡಿದ ಮೋದಿ

Webdunia
ಮಂಗಳವಾರ, 10 ಜನವರಿ 2017 (12:30 IST)
ತಮ್ಮ ದಿನಚರಿಯಾದ ಯೋಗವನ್ನು ಬಿಟ್ಟು ಇಂದು ಮುಂಜಾನೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅವರನ್ನು ಕಾಣಲು ದೌಡಾಯಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಮೋದಿ ಅವರೇ ಈ ಮಾಹಿತಿಯನ್ನು ಹೊರಹಾಕಿದ್ದಾರೆ. 

ಯೋಗಾಭ್ಯಾಸವನ್ನು ಬಿಟ್ಟು ತಾಯಿಯನ್ನು ನೋಡಲು ಹೋಗಿದ್ದೆ. ಇಂದಿನ ಉಪಹಾರವನ್ನು ಅವರೊಡನೆ ಸೇವಿಸಿದೆ. ಅವರೊಂದಿಗೆ ಕಳೆದ ಸಮಯ ಅದ್ಭುತವಾಗಿತ್ತು, ಎಂದು ಪ್ರಧಾನಿ ಟ್ವಿಟರ್‌ನಲ್ಲಿ ತಮ್ಮ ಸಂತಷದ ಗಳಿಗೆಯನ್ನು ಮೆಲುಕು ಹಾಕಿದ್ದಾರೆ. 
 
97ರ ಹರೆಯದ ಮೋದಿ ಅವರ ತಾಯಿ, ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಅವರ ಜತೆ ಗಾಂಧಿನಗರದ ಹೊರವಲಯದಲ್ಲಿ ವಾಸಿಸುತ್ತಾರೆ.
 
ಸೋಮವಾರ ಗುಜರಾತ್‌ಗೆ ಆಗಮಿಸಿರುವ ಪ್ರಧಾನಿ ಇಂದು "ವೈಬ್ರೆಂಟ್ ಗುಜರಾತ್" 8ನೇ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.  
 
ಹೀರಾಬಾ ಎಂದು ಕರೆಸಿಕೊಳ್ಳುವ 95 ವರ್ಷದ ಹೀರಾಬೆನ್‌ ಅವರು ಗಾಂಧಿನಗರದಲ್ಲಿ ತಮ್ಮ ಕಿರಿಯ ಮಗ ಪಂಕಜ್‌ ಮೋದಿ ಜೊತೆ ವಾಸವಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೂಡ ಪ್ರಧಾನಿ ತಾಯಿಯನ್ನು ಭೇಟಿಯಾಗಿದ್ದರು. ತಮ್ಮ 66 ನೇ ಜನ್ಮದಿನದಂದು( ಸೆಪ್ಟೆಂಬರ್ 17) ರಂದು ಸಹ ಮೋದಿ ತಾಯಿ ಜತೆ ಸಮಯ ಕಳೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ

ವಿಮಾನವನ್ನು ಕ್ರ್ಯಾಶ್ ಮಾಡುವುದಾಗಿ ವಿಮಾನದೊಳಗೆ ಬೆಂಗಳೂರು ವೈದ್ಯೆ ಚೀರಾಟ, ಹೊರಕಳುಹಿಸಿದ ಕ್ಯಾಬಿನ್ ಸಿಬ್ಬಂದಿ

Video: ಅಂಬೇಡ್ಕರ್ ಫೋಟೋ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಲಾಲೂ ಪ್ರಸಾದ್: ಮೋದಿ ವಾಗ್ದಾಳಿ

ಬಿಜೆಪಿ ಪಕ್ಷದೊಳಗಿನ ಅತೃಪ್ತಿ ಬಗ್ಗೆ ಮಾತನಾಡಿದ ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments