Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ ಮತ್ತೊಂದು ರಾಕ್‌ಸ್ಟಾರ್ ವೆಲ್ ಕಮ್?

ಪ್ರಧಾನಿ ಮೋದಿಗೆ ಮತ್ತೊಂದು ರಾಕ್‌ಸ್ಟಾರ್ ವೆಲ್ ಕಮ್?
ವಾಷಿಂಗ್ಟನ್ , ಗುರುವಾರ, 3 ಸೆಪ್ಟಂಬರ್ 2015 (16:41 IST)
ಸೆಪ್ಟೆಂಬರ್ 27 ರಂದು ಪ್ರಧಾನಿ ಸಿಲಿಕ್ಯಾನ್ ವ್ಯಾಲಿಗೆ ಭೇಟಿ ನೀಡುತ್ತಿದ್ದು ಅಲ್ಲಿ ಆನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಮಾತುಗಳನ್ನಾಲಿಸಲು ಈಗಾಗಲೇ 45,000 ಜನರು ತಮ್ಮ ಹೆಸರನ್ನು ನೋಂದಾಯಿಸಿದ್ದು ವಿದೇಶದಲ್ಲಿ ಮೋದಿಯವರಿಗೆ ಮತ್ತೊಮ್ಮೆ ಅಭೂತಪೂರ್ವ ಸ್ವಾಗತ ಸಿಗುವುದು ನಿಶ್ಚಿತವಾದಂತಾಗಿದೆ. 
 

 
ಸ್ಯಾನ್ ಜೋಸ್‌ನ ಎಸ್ಎಪಿ ಅರೇನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು 45,000 ಜನರು ಹೆಸರು ನೋಂದಾಯಿಸಿದ್ದು ಅಂತಿಮ ಪಟ್ಟಿಯಲ್ಲಿ 18,500 ಜನರು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಸಂಘಟನಾಕಾರರಾದ ಪಶ್ಚಿಮ ಕರಾವಳಿಯ ಇಂಡೋ-ಅಮೆರಿಕನ್ ಸಮುದಾಯ ಸಂಘ ಸ್ಪಷ್ಟಪಡಿಸಿದೆ. 
 
ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 45,000 ಜನರ ಹೆಸರನ್ನು ಗಣಕೀಕೃತ ಡ್ರಾ ಮಾಡಲಾಗುವುದು. ಪ್ರತಿ ಸಾಮಾಜಿಕ ವಿಭಾಗ, ರಾಜ್ಯ, ವಯೋಮಾನ ಮತ್ತು ಲಿಂಗಗಳನ್ನು ಪ್ರತಿನಿಧಿಸುವ ಸಮರ್ಥ 18,5000 ಜನರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗುವುದು ಎಂದು ಸಂಘಟನಾಕಾರರು ತಿಳಿಸಿದ್ದಾರೆ.
 
"ಪ್ರಸ್ತುತ ಹೆಸರನ್ನು ನೋಂದಾಯಿಸಿರುವವರಲ್ಲಿ ವಿಭಿನ್ನ ಸಾಮಾಜಿಕ, ಧಾರ್ಮಿಕ, ಮತ್ತು ವೃತ್ತಿಪರರಿದ್ದಾರೆ.  ಟಾಕ್ಸಿ ಚಾಲಕರು, ರೈತರಿಂದ ಹಿಡಿದು ದೊಡ್ಡ ಕಂಪೆನಿಗಳ ಸಿ.ಇ.ಒಗಳು ಮೋದಿಯವರ ಮಾತುಗಳನ್ನು ಕೇಳಲು ಆತುರರಾಗಿದ್ದಾರೆ. ಇಂತಹ ಉತ್ಸಾಹವನ್ನು ಸಿಲಿಕಾನ್ ಕಣಿವೆಯಲ್ಲಿ ಹಿಂದೆಂದೂ ಕಂಡಿರಲಿಲ್ಲ", ಎಂದು ವೃತ್ತಿಯಲ್ಲಿ ಬಂಡವಾಳಶಾಹಿ ಮತ್ತು ಉದ್ಯಮಿಯಾಗಿರುವ ನರೇನ್ ಗುಪ್ತಾ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಇವರು ಪಶ್ಚಿಮ ಕರಾವಳಿಯ ಇಂಡೋ ಅಮೆರಿಕನ್ ಕಮ್ಯುನಿಟಿ (IACWC) ಸಹ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Share this Story:

Follow Webdunia kannada