Select Your Language

Notifications

webdunia
webdunia
webdunia
webdunia

ಮಂಗಳಯಾನ ಭಾರತದಲ್ಲಿನ ಆಟೋ ಪ್ರಯಾಣಕ್ಕಿಂತ ಅಗ್ಗ!

ಮಂಗಳಯಾನ ಭಾರತದಲ್ಲಿನ ಆಟೋ ಪ್ರಯಾಣಕ್ಕಿಂತ ಅಗ್ಗ!
ನ್ಯೂಯಾರ್ಕ್ , ಸೋಮವಾರ, 29 ಸೆಪ್ಟಂಬರ್ 2014 (13:10 IST)
ಮಂಗಳ ಯಾನದ ತನ್ನ ಮೊಟ್ಟಮೊದಲ ಪ್ರಯತ್ನದಲ್ಲಿ ಭಾರತ ಯಶಸ್ವಿಯಾಗಿರುವುದನ್ನು ನ್ಯೂಯಾರ್ಕ್‌ನಲ್ಲಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳ ಕಕ್ಷಾಗಾಮಿ ಮಿಷನ್ ಭರಿಸಿದ ವೆಚ್ಚವನ್ನು ಅಹಮದಾಬಾದ್‌ನ ಆಟೋ ಪ್ರಯಾಣದ ವೆಚ್ಚಕ್ಕೆ ಹೋಲಿಸಿದ್ದಾರೆ. 

ಭಾರತ ತನ್ನ ಅದ್ಭುತ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯದಿಂದಾಗಿ ವಿಶ್ವದ ಅತ್ಯಂತ ಉನ್ನತ ದೇಶಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಬರೆಸಿಕೊಂಡಿದೆ ಎಂಬುದರ ಕುರಿತು ಮಾತನಾಡುತ್ತಿದ್ದ ಮೋದಿ ಅಹಮದಾಬಾದ್‌ನಲ್ಲಿ  ಆಟೋ ಮೂಲಕ ಒಂದು ಕೀಲೋಮೀಟರ್ ಪ್ರಯಾಣಿಸುವುದಕ್ಕೆ ತಗಲುವ ವೆಚ್ಚ 10 ರೂಪಾಯಿ. ಮಂಗಳನ ಅಂಗಳಕ್ಕೆ ಜಿಗಿದ ಭಾರತದ ನೌಕೆಯ ಒಂದು ಕೀಲೋಮೀಟರ್ ಪ್ರಯಾಣದ ವೆಚ್ಚ ಕೂಡ 10 ರೂಪಾಯಿ, ನಿಜವಾಗಿಯೂ ಇದೊಂದು ಅದ್ಭುತ ಎಂದು ಹೆಮ್ಮೆ ಪಟ್ಟುಕೊಂಡರು. 
 
ಭೂಮಿಯಿಂದ ಮಂಗಳಕ್ಕೆ 650 ಮಿಲಿಯನ್ ಪ್ರಯಾಣಿಸಿದ ಮಾನವರಹಿತ ಬಾಹ್ಯಾಕಾಶ ನೌಕೆಯ ಪ್ರತಿ ಕೀಲೋಮೀಟರ್ ವೆಚ್ಚ ಕೇವಲ 7 ರೂಪಾಯಿ. ಮಂಗಳಯಾನದ ಕುರಿತ ಎಲ್ಲವೂ ಸ್ವದೇಶಿ ನಿರ್ಮಿತವೇ. ಒಂದು ಹಾಲಿವುಡ್ ಚಿತ್ರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ನಾವು ಮಂಗಳವನ್ನು ತಲುಪಿದೆವು. ಮಂಗಳಯಾನದ ತನ್ನ ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾದ ದೇಶ ಭಾರತವೊಂದೇ. ಇದು ಪ್ರತಿಭೆಯಲ್ಲದೆ ಮತ್ತೇನು ಎಂದು ಮೋದಿ ಪ್ರಶ್ನಿಸಿದ್ದಾರೆ. 
 
ಸೆಪ್ಟೆಂಬರ್ 24 ರಂದು ಅತ್ಯಂತ ಕಡಿಮೆ ವೆಚ್ಚದಲ್ಲಿ ತನ್ನ ಮಂಗಳಯಾನ ಪ್ರಯತ್ನದಲ್ಲಿ ಯಶಸ್ವಿಯಾದ ಭಾರತ,ಕೆಂಪು ಗೃಹಕ್ಕೆ ಯಾನ ಕೈಗೊಂಡ ಮೂರು ಗಣ್ಯ ರಾಷ್ಟ್ರಗಳ ಕ್ಲಬ್ ಒಳಗೆ ತನ್ನ ಹೆಸರನ್ನು ಸೇರಿಸಿಕೊಂಡಿತು. 
 
ಮಂಗಳಯಾನ ಯಾತ್ರೆಯ ವೆಚ್ಚವನ್ನು ವಿಜ್ಞಾನಿಗಳು ಆರಂಭದಲ್ಲಿ 100 ಮಿಲಿಯನ್ ಡಾಲರ್‌ಗಳಾಗಬಹುದು ಎಂದು ಅಂದಾಜಿಸಿದ್ದರು. ಆದರೆ, ಕೇವಲ 74 ಮಿಲಿಯನ್ ಡಾಲರ್ ವೆಚ್ಚದಲ್ಲಿ ಯಾತ್ರೆ ಪೂರ್ಣಗೊಂಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.

Share this Story:

Follow Webdunia kannada