Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಒಟ್ಟು ಆಸ್ತಿ 1.40 ಕೋಟಿ, ನಗದು ಕೇವಲ 4700 ರೂ.ಗಳು ಮಾತ್ರವಂತೆ..!

ಪ್ರಧಾನಿ ಮೋದಿ ಒಟ್ಟು ಆಸ್ತಿ 1.40 ಕೋಟಿ, ನಗದು ಕೇವಲ 4700 ರೂ.ಗಳು ಮಾತ್ರವಂತೆ..!
ನವದೆಹಲಿ , ಸೋಮವಾರ, 1 ಫೆಬ್ರವರಿ 2016 (20:55 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸ್ತಿ 1.41 ಕೋಟಿ ರೂಪಾಯಿಗಳಿಗೆ ತಲುಪಿದ್ದರೂ ಅವರಲ್ಲಿರುವ ನಗದು ಹಣ ಕೇವಲ 4700 ರೂಪಾಯಿಗಳು ಮಾತ್ರ. ಕಳೆದ 13 ವರ್ಷಗಳ ಹಿಂದೆ ಖರೀದಿಸಿದ ಆಸ್ತಿಯ ಮೌಲ್ಯದಲ್ಲಿ 25 ಪಟ್ಟು ಏರಿಕೆಯಾಗಿದ್ದರಿಂದ ಒಟ್ಟು ಆಸ್ತಿ ಮೌಲ್ಯದಲ್ಲಿ ಹೆಚ್ಚಳವಾಗಿದೆ. 
 
ಪ್ರಧಾನಮಂತ್ರಿಯವರ ಕಚೇರಿಯ ದಾಖಲೆಗಳ ಪ್ರಕಾರ, ಕಳೆದ ಆರ್ಥಿಕ ವರ್ಷಾಂತ್ಯಕ್ಕೆ, ಮೋದಿ ಕೈಯಲ್ಲಿ 4700 ರೂಪಾಯಿಗಳು ಮಾತ್ರ ನಗದು ಹಣವಿದೆ. ಕಳೆದ ಆಗಸ್ಟ್ 2014ರ ಆರ್ಥಿಕ ವರ್ಷಾಂತ್ಯಕ್ಕೆ ಮೋದಿ ಬಳಿ 38700 ರೂಪಾಯಿಗಳ ನಗದು ಹಣವಿತ್ತು.
 
ಏತನ್ಮಧ್ಯೆ, ಪ್ರಧಾನಿ ಮೋದಿಯವರ ಚರ, ಸ್ಥಿರ ಆಸ್ತಿ 1,26,12,288 ಕೋಟಿ ರೂಪಾಯಿಗಳಿಂದ 1,41,14,893 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
 
ಮೋದಿಯವರ ಹೆಸರಲ್ಲಿ ಯಾವುದೇ ವಾಹನವಿಲ್ಲ. ಅವರಿಗೆ ಕೇವಲ ಗುಜರಾತ್‌ನಲ್ಲಿ ಮಾತ್ರ ಬ್ಯಾಂಕ್‌ ಖಾತೆಯಿದ್ದು, ದೆಹಲಿಯಲ್ಲಿ ಯಾವುದೇ ಬ್ಯಾಂಕ್ ಖಾತೆಯಿಲ್ಲ ಎಂದು ದಾಖಲಿಸಲಾಗಿದೆ.
 
ಮೋದಿಯವರಿಗೆ ಯಾವುದೇ ಸಾಲವಿಲ್ಲ. 45 ಗ್ರಾಂಗಳ ಚಿನ್ನದ ಉಂಗುರುಗಳಿದ್ದು ಅದರ ಮೌಲ್ಯ 1.19 ಲಕ್ಷ ರೂಪಾಯಿಗಳಾಗಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada