ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅಬ್ಬರದ ಪ್ರಚಾರ

Krishnaveni K
ಶನಿವಾರ, 18 ಮೇ 2024 (10:25 IST)
ನವದೆಹಲಿ: ಲೋಕಸಭೆ ಚುನಾವಣೆ ಕಣದಲ್ಲಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ತಮ್ಮ ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೋದಿ ಮತ್ತು ರಾಹುಲ್ ನೇರವಾಗಿ ವಾಗ್ಯುದ್ಧ ಆರಂಭಿಸಿದ್ದಾರೆ. ಇಂದು ಮತ್ತೊಮ್ಮೆ ಒಂದೇ ದಿನ ಇಬ್ಬರೂ ಘಟಾನುಘಟಿ ನಾಯಕರು ಪ್ರಚಾರ ಕಣದಲ್ಲಿ ರಂಗೇರಿಸಲಿದ್ದಾರೆ.  ಪ್ರಧಾನಿ ಮೋದಿಗೆ ಇದು ದೆಹಲಿಯಲ್ಲಿ ಮೊದಲ ಚುನಾವಣಾ ಸಮಾವೇಶವಾಗಿರಲಿದೆ.

ಪ್ರಧಾನಿ ಮೋದಿ ಪೂರ್ವ ದೆಹಲಿಯಲ್ಲಿ ಇಂದು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ ಸಮವೇಶ ನಡೆಯಲಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಿಸಲು ಬಿಜೆಪಿ ತಯಾರಿ ನಡೆಸಿದೆ. ಇದಕ್ಕಾಗಿ ನಿನ್ನೆಯೇ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಇಂದು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಇನ್ನೊಂದೆಡೆ ರಾಹುಲ್ ಗಾಂಧಿ ಕೂಡಾ ಇಂದು ಸಂಜೆ ಚಾಂದಿನಿ ಚೌಕ್ ನಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿಗೂ ಇದು ದೆಹಲಿಯಲ್ಲಿ ಮೊದಲ ಚುನಾವಣಾ ಸಮಾವೇಶವಾಗಿರಲಿದೆ. ದೆಹಲಿಯ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಮೇ 25 ರಂದು ಮತದಾನ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ನವದೆಹಲಿ ದಟ್ಟ ಮಂಜು, ಹವಾಮಾನ ಎಫೆಕ್ಟ್‌, ಇಂದು ಕೂಡಾ ವಿಮಾನ ಪ್ರಯಾಣಿಕರಿಗೆ ಶಾಕ್

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ಮುಂದಿನ ಸುದ್ದಿ
Show comments