Select Your Language

Notifications

webdunia
webdunia
webdunia
webdunia

ಭಾರತ ದೇಶವೇ ನನ್ನ ಧರ್ಮ, ಸಂವಿಧಾನವೇ ಪವಿತ್ರ ಪುಸ್ತಕ: ಮೋದಿ

ಭಾರತ ದೇಶವೇ ನನ್ನ ಧರ್ಮ, ಸಂವಿಧಾನವೇ ಪವಿತ್ರ ಪುಸ್ತಕ: ಮೋದಿ
ನವದೆಹಲಿ , ಶುಕ್ರವಾರ, 27 ಫೆಬ್ರವರಿ 2015 (16:23 IST)
ಬಿಜೆಪಿ ಪಕ್ಷ ಕೋಮುವಾದವನ್ನು ಹರಡುತ್ತಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಪ್ರದಾನಿ ಮೋದಿ, ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಇಬ್ಬಾಗಿಸುವ ಹಕ್ಕು ಯಾರಿಗೂ ಇಲ್ಲ. ನನ್ನ ಮಟ್ಟಿಗೆ ಭಾರತ ದೇಶವೇ ನನ್ನ ಧರ್ಮ, ಸಂವಿಧಾನವೇ ಪವಿತ್ರ ಪುಸ್ತಕ ಎಂದು ಹೇಳಿದ್ದಾರೆ. 
 
ದೇಶದ ಯಾರೊಬ್ಬ ನಾಗರಿಕನು ಕಾನೂನು ಕೈಗೆ ತೆಗೆದುಕೊಂಡು ಸಮುದಾಯಗಳ ಮಧ್ಯೆ ವಿಷ ಬೀಜ ಬಿತ್ತುವುದು ಸರಿಯಲ್ಲ. ದೇಶದ ಜನತೆಯ ಏಳಿಗೆಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. 
 
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದಗಳನ್ನು ಅರ್ಪಿಸುವ ಸಂದರ್ಭದಲ್ಲಿ ಕೋಮುವಾದದ ಬಗ್ಗೆ ವಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. 
 
ಇದಕ್ಕಿಂತ ಮೊದಲು, ದೇಶದ ಜನತೆ ಕಪ್ಪು ಹಣ ವಾಪಸಾತಿ ತರುವ ಬಗ್ಗೆ ನಮ್ಮ ಸರಕಾರ ಬದ್ಧವಾಗಿದೆ. ವಿಪಕ್ಷಗಳು ಅನುಮಾನದಿಂದ ಸರಕಾರವನ್ನು ನೋಡುವುದು ಬೇಡ ಎಂದು ಮನವಿ ಮಾಡಿದರು.
 
ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗ ಮೊದಲ ಸಂಪುಟ ಸಭೆ ನಡೆದಾಗ ಕಪ್ಪು ಹಣ ವಾಪಸ್ ತರುವ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು ಎನ್ನುವುದು ವಿಪಕ್ಷಗಳು ಮರೆಯುವುದು ಬೇಡ ಎಂದು ಪ್ರದಾನಮಂತ್ರಿ ನರೇಂದ್ರ ಮೋದಿ  ವ್ಯಂಗ್ಯವಾಡಿದರು.
 

Share this Story:

Follow Webdunia kannada