Select Your Language

Notifications

webdunia
webdunia
webdunia
webdunia

ಜನ್ಮದಿನಕ್ಕೆಮೋದಿಗೆ ಅಮ್ಮ ನೀಡಿದ ಉಡುಗೊರೆ ಏನು? ಅವರದನ್ನು ನೀಡಿದ್ಯಾರಿಗೆ?

ಜನ್ಮದಿನಕ್ಕೆಮೋದಿಗೆ ಅಮ್ಮ ನೀಡಿದ ಉಡುಗೊರೆ ಏನು? ಅವರದನ್ನು ನೀಡಿದ್ಯಾರಿಗೆ?
ಗಾಂಧೀನಗರ , ಬುಧವಾರ, 17 ಸೆಪ್ಟಂಬರ್ 2014 (12:38 IST)
ಇಂದು ತಮ್ಮ 64 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ಗುಜರಾತಿನ ಗಾಂಧೀನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ತಮ್ಮ ತಾಯಿಯ ಆರ್ಶೀರ್ವಾದ ಪಡೆದುಕೊಂಡರು. 

ಶಿರಬಾಗಿಸಿ ತಮ್ಮ ಪಾದ ಸ್ಪರ್ಶಿಸಿದ ಮಗನ ತಲೆ ನೇವರಿಸಿದ 95ರ ಹೀರಾಬೆನ್, ತಮ್ಮ ಹೆಮ್ಮೆಯ ಕಂದನಿಗೆ ಸಿಹಿ ತಿನಿಸಿದರು. ಜತೆಗೆ ಜನ್ಮದಿನದ ಉಡುಗೊರೆಯಾಗಿ ಮಗನಿಗೆ  5001 ರೂಪಾಯಿಗಳನ್ನು ನೀಡಿದರು. ತಾಯಿಯಿಂದ ಗಿಫ್ಟ್‌ನ್ನು ಪಡೆದ ಮೋದಿ  ಅದನ್ನು ಜಮ್ಮು ಕಾಶ್ಮೀರ ಪ್ರವಾಹ ಪರಿಹಾರ ನಿಧಿಗೆ ದಾನವಾಗಿ ನೀಡಿದರು.
 
ಇಂದು 64 ನೇ ವರ್ಷಕ್ಕೆ ಕಾಲಿಟ್ಟ ಮೋದಿ ಅಹಮದಾಬಾದಿನಿಂದ 23 ಕಿಲೋಮೀಟರ್ ದೂರದಲ್ಲಿರುವ ಗಾಂಧೀನಗರದಲ್ಲಿರುವ ತಮ್ಮ ನಿವಾಸಕ್ಕೆ  ಯಾವುದೇ ಭದ್ರತೆಗಳಿಲ್ಲದೆ ಸಾಮಾನ್ಯ ವಾಹನದಲ್ಲಿ  ಒಬ್ಬರೇ ಪ್ರಯಾಣಿಸಿದರು. 
 
ತಮ್ಮ ಜಪಾನ್ ಸಹೋದ್ಯೋಗಿ ಶಿಂಜೋ ಅಬೆ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಮೋದಿ ಶುಭಾಶಯದ ಕರೆಗಳನ್ನು ಪಡೆದರು. 
 
ಜಪಾನ್ ಪ್ರಧಾನಿಯಿಂದ ಹಾರೈಕೆ ಸ್ವೀಕರಿಸಿ ಮೋದಿ ಆನಂದಿಸಿದ್ದು, ಇಬ್ಬರ ನಡುವಿನ ವಿಶೇಷ ಬಂಧದ ಪ್ರತಿಬಿಂಬದಂತಿತ್ತು.

Share this Story:

Follow Webdunia kannada