Webdunia - Bharat's app for daily news and videos

Install App

ಸಿಎಂಗಳ ಜೊತೆ ಇಂದು ಮೋದಿ ಮಹತ್ವದ ಮೀಟಿಂಗ್: ಮಹತ್ವದ ಘೋಷಣೆ ಕಾದಿದೆಯಾ

Krishnaveni K
ಶುಕ್ರವಾರ, 27 ಮಾರ್ಚ್ 2026 (09:35 IST)
ನವದೆಹಲಿ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಇಂದು ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆ ಬಳಿಕ ಮಹತ್ವದ ಘೋಷಣೆ ಹೊರಬೀಳಬಹುದೇ ಎಂಬ ಕುತೂಹಲ ಜನರಲ್ಲಿದೆ.

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ತೈಲ, ಅನಿಲ ಮತ್ತು ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಭಾರತದಲ್ಲೂ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಆಹಾರ ಉದ್ಯಮಗಳು ಸಂಕಷ್ಟದಲ್ಲಿವೆ.

ಇಂದು ಸಂಜೆ 6.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಸಿಲಿಂಡರ್ ಅಭಾವ ಉಂಟಾಗಿರುವುದರಿಂದ ಅದನ್ನು ನಿಭಾಯಿಸುವ ಕುರಿತು ಸಭೆ ನಡೆಯಲಿದೆ. ತೈಲ, ಅನಿಲ ಪೂರೈಕೆಯಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಸಮನ್ವಯತೆ ಸಾಧಿಸಲು ಈ ಸಭೆ ನಡೆಯುತ್ತಿದೆ.

ಈಗಾಗಲೇ ಕೊವಿಡ್ ಪರಿಸ್ಥಿತಿಯಲ್ಲಿ ಎದುರಿಸಲು ಸಿದ್ಧರಾಗಿ ಎಂದು ದೇಶದ ಜನರಿಗೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಇದೀಗ ಕೊವಿಡ್ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರಗಳು ಸಮನ್ವಯತೆಯಿಂದ ಪರಿಸ್ಥಿತಿ ನಿಭಾಯಿಸಿದಂತೆ ಈಗಲೂ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಮೋದಿ ಸಲಹೆಗಳನ್ನು ನೀಡಲಿದ್ದಾರೆ. ಈ ಸಭೆ ಬಳಿಕ ಮಹತ್ವದ ಘೋಷಣೆಯೇನಾದರೂ ಹೊರಬಹುದೇ ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ನೈರುತ್ಯ ರೈಲ್ವೆ ವ್ಯಾಪ್ತಿಗೆ: ಕೇರಳ ಅಡ್ಡಗಾಲು ಬೆನ್ನನ್ನೇ ಡಿಕೆ ಶಿವಕುಮಾರ್‌ಗೆ ಬ್ರಿಜೇಶ್ ಚೌಟ ಪತ್ರ

ಮೊಬೈಲ್ ಕೊಡಲಿಲ್ಲವೆಂದು ಸಹೋದರಿಯನ್ನು ಕೊಂದಿದ್ದ ತಮ್ಮನಿಗೆ 4ವರ್ಷದ ಬಳಿಕ ತೀರ್ಪು ಪ್ರಕಟ

ರಾಜಧಾನಿಯ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2,500

ಯಾರಿಂದಲೂ ಇನ್ನೊಬ್ಬರ ನಾಯಕತ್ವವನ್ನು ತಪ್ಪಿಸೋಕೆ ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

Toxic Cinema: ರುಕ್ಮಿಣಿ ನಿಮ್ಮಿಂದ ಇದನ್ನು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ

ಮುಂದಿನ ಸುದ್ದಿ
Show comments