Select Your Language

Notifications

webdunia
webdunia
webdunia
webdunia

ಬಾಂಗ್ಲಾ ಪ್ರವಾಸ: ಮೋದಿ ಜತೆ ದೀದಿ

ಬಾಂಗ್ಲಾ ಪ್ರವಾಸ: ಮೋದಿ ಜತೆ ದೀದಿ
ನವದೆಹಲಿ , ಶುಕ್ರವಾರ, 29 ಮೇ 2015 (11:13 IST)
ಪ್ರಧಾನಿ ನರೇಂದ್ರ ಮೋದಿಯವರು ಬರುವ ತಿಂಗಳು ಜೂನ್ 6 ರಿಂದ ನೆರೆ ರಾಷ್ಟ್ರ ಬಾಂಗ್ಲಾಕ್ಕೆ ಭೇಟಿ ನೀಡಲಿದ್ದು, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಪ್ರವಾಸದಲ್ಲಿ ಅವರಿಗೆ ಸಾಥ್ ನೀಡಲಿದ್ದಾರೆ. 

ಕೋಲಕತ್ತಾದಲ್ಲಿ ಮೇ 10 ರಂದು ಮೋದಿ ಮತ್ತು ಮಮತಾ ಭೇಟಿಯಾಗಿದ್ದರು. 2 ದಿನಗಳ ಬಾಂಗ್ಲಾ ದೇಶ ಪ್ರವಾಸದಲ್ಲಿ ಜತೆಯಾಗುವಂತೆ ಮಮತಾರವರಿಗೆ ಆಹ್ವಾನ ನೀಡಿದ್ದರು. ಈ ಮೂಲಕ ದೀದಿಯವರಿಗೆ ತಮ್ಮ ಮೇಲಿದ್ದ ಮುನಿಸನ್ನು ನಿವಾರಿಸಿಕೊಳ್ಳುವುದು ಮೋದಿಯವರ ಉದ್ದೇಶವಾಗಿತ್ತು. ಮೋದಿಯವರ ಆಮಂತ್ರಣಕ್ಕೆ ಮಮತಾರವರು ಕೂಡ ಸಮ್ಮತಿ ಸೂಚಿಸಿದ್ದರು.  
 
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಲದ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ, "ಪ್ರಧಾನಿಯವರ ಜತೆ ನಮ್ಮ ಮುಖ್ಯಮಂತ್ರಿಗಳು ಸಹ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿ ಎರಡು ದೇಶಗಳ ನಡುವಿನ   ಸಂಬಂಧವನ್ನು ಬಲಪಡಿಸಲಿದೆ", ಎಂಬ ಆಶಾ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ. 
 
ಈ ಭೇಟಿ ಬಾಂಗ್ಲಾದಲ್ಲು ಕೂಡ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಶೇಖ್ ಹಸೀನಾ ಸರ್ಕಾರ ಭಾರತ ಐತಿಹಾಸಿಕ ಗಡಿ ಒಪ್ಪಂದಕ್ಕೆ ಸಹಿ ಹಾಕಲಿದೆ ಮತ್ತು ತೀಸ್ತಾ ನೀರು ಹಂಚಿಕೆ ಕುರಿತಂತೆ ಮಹತ್ವದ ನಿರ್ಣಯವಾಗಲಿದೆ ಎಂಬ ಆಶಾ ಭಾವನೆಯನ್ನು ಹೊಂದಿದೆ.
 
ಜೂನ್ 6ರಂದು ಢಾಕಾದಲ್ಲಿ ಮೋದಿಯವರು ಬಾಂಗ್ಲಾದೇಶ ಜತೆಗಿನ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನವೀಕರಿಸಲಿದ್ದಾರೆ.

Share this Story:

Follow Webdunia kannada