ಪವಿತ್ರ ರಂಜಾನ್ ಮಾಸ ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಬಾಂಧವರಿಗೆ ಶುಭಾಷಯ ಕೋರಿದ್ದಾರೆ.
ಈ ಪವಿತ್ರ ಮಾಸವು ಸಮಾಜದಲ್ಲಿ ಪರಸ್ಪರ ಭಾತೃತ್ವ ಹಾಗೂ ಸಾಮರಸ್ಯ ಚೈತನ್ಯವನ್ನು ಹೆಚ್ಚಿಸಲಿ ಎಂದು ಹೇಳಿರುವ ಪ್ರಧಾನಿ ಮೋದಿ, ಈ ಶುಭಗಳಿಗೆಯಲ್ಲಿ ಸಂಪೂರ್ಣ ಮುಸ್ಲಿಂ ಸಮುದಾಯಕ್ಕೆ ನನ್ನ ಹಾರ್ದಿಕ ಶುಭಾಶಯಗಳು ಎಂದು ಹಾರೈಸಿದ್ದಾರೆ.
ಪ್ರಸ್ತುತ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ.
ರಂಜಾನ್ ಪ್ರಾರ್ಥನೆ, ದಿನದ ಹೊತ್ತು ಉಪವಾಸ ಮತ್ತು ರಾತ್ರಿ ಸಡಗರಾಚರಣೆಯ ಹಬ್ಬವಾಗಿದೆ.
ಪ್ರಾರ್ಥನೆ, ದಾನ, ನಂಬಿಕೆ, ಉಪವಾಸ ಮತ್ತು ಹಜ್ ತೀರ್ಥಯಾತ್ರೆ ಇಸ್ಲಾಂ ಧರ್ಮದ ಐದು ಪ್ರಮುಖ ಕಂಬಗಳಾಗಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.