Select Your Language

Notifications

webdunia
webdunia
webdunia
webdunia

ಆಸ್ತಿ ಘೋಷಿಸಲು ಪಕ್ಷದ ಸಂಸದರಿಗೆ 48 ಗಂಟೆಗಳ ಗಡುವು ನೀಡಿದ ಪ್ರಧಾನಿ

ಆಸ್ತಿ ಘೋಷಿಸಲು ಪಕ್ಷದ ಸಂಸದರಿಗೆ 48 ಗಂಟೆಗಳ ಗಡುವು ನೀಡಿದ ಪ್ರಧಾನಿ
ನವದೆಹಲಿ , ಬುಧವಾರ, 26 ನವೆಂಬರ್ 2014 (12:15 IST)
ತಮ್ಮ ಪಕ್ಷದ ಸಂಸದರ ಮೇಲೆ ಚಾವಟಿ ಬೀಸಿರುವ ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಯಾರು ತಮ್ಮ ಆಸ್ತಿ ವಿವರ ಘೋಷಣೆ ಮಾಡಿಲ್ಲವೋ, ಅವರೆಲ್ಲ ಮುಂದಿನ 48 ಗಂಟೆಯೊಳಗೆ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಅದನ್ನು ಘೋಷಿಸಿರಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಸರಕಾರ ಅಧಿಕಾರಕ್ಕೆ ಬಂದು 100 ದಿನಗಳು ಕಳೆದರೂ ಕಪ್ಪುಹಣ ತರುವ ಭರವಸೆಯನ್ನು ಈಡೇರಿಸದ್ದಕ್ಕೆ, ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವೃ ವಿರೋಧ ವ್ಯಕ್ತ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ತಮ್ಮ ಪಕ್ಷದ ಸಂಸದರಿಗೆ ಈ ಸೂಚನೆ ನೀಡಿದ್ದಾರೆ.
 
ಮೋದಿ ಸರಕಾರ ಆಡಳಿತಕ್ಕೆ ಬಂದು 6 ತಿಂಗಳುಗಳು ಕಳೆದರೂ ಕಪ್ಪುಹಣ ತರುವಲ್ಲಿ ಯಾವುದೇ ಸಫಲತೆಯನ್ನು ಗಳಿಸಿಲ್ಲ ಎಂದು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ  ಕಳೆದ ಸೋಮವಾರದಿಂದ ಪ್ರಾರಂಭವಾಗಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವನ್ನು ಎಬ್ಬಿಸುತ್ತಿವೆ.
 
ಹದಿನಾರನೇ ಲೋಕಸಭೆ ಅಸ್ತಿತ್ವಕ್ಕೆ ಬಂದು 5 ತಿಂಗಳು ಕಳೆದರೂ, ಹಾಲಿ ಸಂಸದರ ಪೈಕಿ 401 ಮಂದಿ ತಮ್ಮ ಆಸ್ತಿ ವಿವರ ಸಲ್ಲಿಸಲೇ ಇಲ್ಲ ಎಂಬ ಮಾಹಿತಿ  ಕಳೆದ ತಿಂಗಳು ವರದಿಯಾಗಿತ್ತು
 
ಪಟ್ಟಿಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ವಿವರ ಕೊಡದವರಲ್ಲಿ ಸೋನಿಯಾ, ರಾಹುಲ್, ಅಡ್ವಾಣಿ, ರಾಜನಾಥ್ ಪ್ರಮುಖರು. 
 
ಲೋಕಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ 90 ದಿನಗಳ ಒಳಗಾಗಿ ಸಂಸದರು ಆಸ್ತಿ ವಿವರ ಸಲ್ಲಿಕೆ ಮಾಡಬೇಕು ಎಂಬ ಕಾನೂನಿದೆ.

Share this Story:

Follow Webdunia kannada