Select Your Language

Notifications

webdunia
webdunia
webdunia
webdunia

ಮುಲಾಯಂ ಯೋಜನೆಗಳನ್ನು ಕದ್ದಿದ್ದಾರಂತೆ ಮೋದಿ !

ಮುಲಾಯಂ ಯೋಜನೆಗಳನ್ನು ಕದ್ದಿದ್ದಾರಂತೆ ಮೋದಿ !
ಲಕ್ನೋ , ಸೋಮವಾರ, 24 ನವೆಂಬರ್ 2014 (08:54 IST)
ತಾವು ಜಾರಿಗೆ ತಂದ  ಕೆಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನಕಲು ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.
ಗ್ರಾಮಗಳ ದತ್ತು, ಶೌಚಾಲಯಗಳ ನಿರ್ಮಾಣ ಇವು ತಾವು 90ರ ದಶಕದಲ್ಲಿ ಜಾರಿಗೆ ತಂದ ಯೋಜನೆಗಳಾಗಿವೆ. ಮೋದಿ ಈಗ ಇವನ್ನು ನಕಲು ಮಾಡುತ್ತಿದ್ದಾರಷ್ಟೇ ಎಂದು ಸಮಾಜವಾದಿ ನಾಯಕ ಹೇಳಿದ್ದಾರೆ.
 
ನಗರದಲ್ಲಿ ಆಯೋಜಿತಕೊಂಡಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು " ಮೋದಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮಾತುಗಳನ್ನಾಡುತ್ತಾರೆ.  1990ರಲ್ಲಿ ನಾನು ಗ್ರಾಮಗಳನ್ನ ದತ್ತು ತೆಗೆದುಕೊಂಡಿದ್ದೆ. ಸಾರ್ವಜನಿಕ ಶೌಚಾಲಯಗಳ ನಿರ್ಮಾಣದಂತಹ ಯೋಜನೆಗಳಿಗೆ ಚಾಲನೆ ನೀಡಿದ್ದೆ. ಪ್ರಧಾನಿ ಈಗ ಮಾತನಾಡುತ್ತಿರುವುದನ್ನ ನಾನಾಗಲೇ ಮಾಡಿದ್ದೆ. ಇದು ನಿಮಗೆ ತಿಳಿದಿರಲಿ" ಎಂದು ಹೇಳಿದರು.
 
ತಮ್ಮ ಪಕ್ಷದ ನಾಯಕರು, ಸಂಸದರು ಮತ್ತು ಮಂತ್ರಿಗಳ ಬಳಿ "ಕನಿಷ್ಠ ಎರಡು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸಿರಿ. ನೀವು ನಿಮ್ಮ  ನಿಮ್ಮ ಪ್ರದೇಶದಲ್ಲಿ  ಕೆಲಸ ಮಾಡಿ ಜವಾಬ್ದಾರಿಗಳನ್ನು ಅರಿತುಕೊಳ್ಳಿ. ಆಗ ಬದಲಾವಣೆ ತನ್ನಿಂತಾನೇ ಸಾಧ್ಯವಾಗುತ್ತದೆ" ಎಂದು ಅವರು ಸಲಹೆ ನೀಡಿದರು.
 
ಮೋದಿಯ ಸ್ವಚ್ಛತಾ ಆಂದೋಲದ ಬಗ್ಗೆ ವ್ಯಂಗ್ಯವಾಡಿದ ಮುಲಾಯಂ, "ನೀವು ಕೊಳಕನ್ನು ಅಳಿಸುವ ಮಾತನ್ನಾಡುತ್ತೀರಿ. ಮೊದಲು ಬಡತನವನ್ನು ನಿರ್ಮೂಲನೆ ಮಾಡಿ, ಬಳಿಕ ಕೊಳಕುತನ ತನ್ನಂತಾನೆ ಹೊರಟುಹೋಗುತ್ತದೆ" ಎಂದರು.
 
ಪ್ರಧಾನಿ ಮೋದಿ ಪದೇಪದೇ ವಿದೇಶಗಳಿಗೆ ಭೇಟಿ ಕೊಡುತ್ತಿರುವುದನ್ನು ಸ್ವಾಗತಿಸಿದ ಯಾದವ್ "ವೈಯಕ್ತಿಕವಾಗಿ ಅವರ ಪ್ರವಾಸ ಮಾಡುತ್ತಿರುವುದು ಉತ್ತಮವಾದುದು ಎಂದು ಭಾವಿಸುತ್ತೇನೆ. ನೆರೆಹೊರೆಯ ಮತ್ತು ಇತರ ರಾಷ್ಟ್ರಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದೇ. ಆ ಮೂಲಕ ವೈರತ್ವವನ್ನು ಕಡಿಮೆ ಮಾಡಬಹುದು. ಆದರೆ, ಎಷ್ಟು ರಾಷ್ಟ್ರಗಳೊಂದಿಗೆ ಸ್ನೇಹ ಸಂಪಾದಿಸಿದ್ದೀರಿ" ಎಂದು ಪ್ರಧಾನಿಯನ್ನು ನಾನು ಕೇಳಬಯಸುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada