Select Your Language

Notifications

webdunia
webdunia
webdunia
webdunia

ರಾಜಕೀಯ ಶತ್ರು ದಿಗ್ವಿಜಯ್ ಸಿಂಗ್ ಮಗನ ಆರತಕ್ಷತೆ ಸಮಾರಂಭದಲ್ಲಿ ಮೋದಿ

ರಾಜಕೀಯ ಶತ್ರು ದಿಗ್ವಿಜಯ್ ಸಿಂಗ್ ಮಗನ ಆರತಕ್ಷತೆ ಸಮಾರಂಭದಲ್ಲಿ ಮೋದಿ
ನವದೆಹಲಿ , ಶನಿವಾರ, 23 ಮೇ 2015 (12:07 IST)
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಮಗ ಜೈವರ್ಧನ್ ಸಿಂಗ್ ಅವರ  ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭ ಹಾರೈಸಿ, ಆಶೀರ್ವದಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಪರಷ್ಪರ ಆರೋಪ- ಪ್ರತ್ಯಾಪಗಳ ಎರೆಚಾಟ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತ ಎಂಬುದನ್ನು ಸಾಬೀತುಪಡಿಸಿದ್ದಾರೆ. 
ಶುಕ್ರವಾರ ಅಶೋಕಾ ಹೊಟೆಲ್‌ನಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು.  
 
ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಮೋದಿ ಮತ್ತು ಬಿಜೆಪಿಯನ್ನು ಟೀಕಿಸುವ ಮೂಲಕವೇ ಗುರುತಿಸಿಕೊಳ್ಳುತ್ತಾರೆ.  
 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಗೃಹ ಸಚಿವರಾದ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಾಗಿ ವಧು ವರರಿಗೆ ಶುಭ ಹಾರೈಸಿದರು.
 
ಸ್ವತಃ ದಿಗ್ವಿಜಯ್‌ ಸಿಂಗ್‌ ಮತ್ತು ಮದುಮಗ ಜಯವರ್ಧನ್‌ ಅವರೇ ಮುಂದೆ ಬಂದು ಮೋದಿಯವರನ್ನು ಆದರದಿಂದ ಬರಮಾಡಿಕೊಂಡು ಅವರ  ಕೈ ಹಿಡಿದುಕೊಂಡು ಮದುವೆ ಮಂಟಪಕ್ಕೆ ಕರೆದೊಯ್ದರು.ವಧು ಮೋದಿಯವರ ಕಾಲಿಗೆರಗಲು ಬಗ್ಗಿದಾಗ ಮೋದಿ ಅವರನ್ನು ತಡೆದರು. 
 
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ದುಮಾರಿಯಾ ರಾಜವಂಶಸ್ಥೆಯಾಗಿರುವ ಶ್ರೀಜಮ್ಯಾ ಷಾಹಿ ಜತೆ ದೆಹಲಿಯ ತಮ್ಮ ತೋಟದ ಮನೆಯಲ್ಲಿ ಮೇ 19, 2015 ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದರು.

Share this Story:

Follow Webdunia kannada