Select Your Language

Notifications

webdunia
webdunia
webdunia
webdunia

ಮೈ ಗವರ್ನಮೆಂಟ್‌ ವೆಬ್‌ಸೈಟ್‌ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಮೈ ಗವರ್ನಮೆಂಟ್‌ ವೆಬ್‌ಸೈಟ್‌ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ , ಶನಿವಾರ, 26 ಜುಲೈ 2014 (16:41 IST)
ಗಂಗಾ ನದಿ ಸ್ವಚ್ಚತೆ ಅಥವಾ ಕುಶಲ ಕೈಗಾರಿಕೆ ಅಭಿವೃದ್ಧಿ ಕುರಿತಂತೆ ಜನತೆ ತಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ ಎನ್ನುವ ಉದ್ದೇಶದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ  mygov.nic.in ಹೊಸ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ. 
 
ವೆಬ್‌ಸೈಟ್‌ನಲ್ಲಿ ಸರಕಾರ ಎರಡು ತಿಂಗಳ ಅವಧಿಯಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಎರಡು ತಿಂಗಳ ಅವಧಿಯಲ್ಲಿ ಸರಕಾರದ ಅನುಭವಕ್ಕೆ ಬಂದ ವಿಷಯವೆಂದರೆ, ಸಾವಿರಾರು ಜನರು ದೇಶ ನಿರ್ಮಾಣದಲ್ಲಿ ಸರಕಾರದೊಂದಿಗೆ ತಮ್ಮ ಸಮಯ, ಅನುಭವ ಮತ್ತು ಶಕ್ತಿಯನ್ನು ಬಳಸಲು ಇಚ್ಚಿಸಿದ್ದಾರೆ. ಆದ್ದರಿಂದ ಹೊಸ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. 
 
ಕೇಂದ್ರ ಸರಕಾರದ mygov.nic.in ವೆಬ್‌ಸೈಟ್‌‍ಗೆ ಜನರು ಲಾಗಿನ್ ಮಾಡಿ ಪ್ರಮುಖ ವಿಷಯಗಳು ಅಥವಾ ಸಮಸ್ಯೆಗಳ ಬಗ್ಗೆ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ಪೋಸ್ಟ್ ಮಾಡಬಹುದಾಗಿದೆ.
 
ಇಂತಹ ವೆಬ್‌ಸೈಟ್‌ಗಳಿಂದ ಜನತೆ ಮತ್ತು ಸರಕಾರದ ಮಧ್ಯೆ ಸಾಮರಸ್ಯ ಹೆಚ್ಚಾಗುತ್ತದೆ. ಸರಕಾರದಲ್ಲಿ ಜನತೆಯ ಸಹಭಾಗಿತ್ವವಿಲ್ಲದಿದ್ದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಕೇವಲ ಚುನಾವಣೆಗಳಿಗೆ ಮಾತ್ರ ಜನತೆ ಮತ್ತು ರಾಜಕಾರಣಿಗಳ ಮಾತ್ರ ಸಾಮರಸ್ಯವಿದ್ದರೆ ಸಾಲದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 

Share this Story:

Follow Webdunia kannada