ನವದೆಹಲಿ : ಕಾಂಗ್ರೆಸ್ ಪಕ್ಷವು ಭಾರತದ ಜನತೆ, ಭಾರತದ ಕಲ್ಪನೆ v/s ವ್ಯಕ್ತಿಯೋರ್ವರ ಕಲ್ಪನೆಯ ನಡುವೆ ಹೋರಾಟವನ್ನು ನಡೆಸುತ್ತಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜ್ಞಾನವಿದೆ. ತಮ್ಮ ಕಲ್ಪನೆಯನ್ನೇ ದೇಶದ ಕಲ್ಪನೆಯೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕೀಯದಲ್ಲಿ ಕೇಳಲಾಗುವ ಪ್ರಶ್ನೆ ಎಂದರೆ ಭಾರತ ಎಂದರೇನು? ಭಾರತವು ಒಂದು ಪ್ರದೇಶ ಎಂದು ಅವರು ಹೇಳುತ್ತಾರೆ. ಭಾರತವು ಜನರು ಎಂದು ನಾವು ಹೇಳುತ್ತೇವೆ, ಸಂಬಂಧಗಳು ಅಲ್ಲಿವೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತವು ಹಿಂದೂ ಮತ್ತು ಮುಸ್ಲಿಂ, ಹಿಂದೂ, ಮುಸ್ಲಿಂ ಮತ್ತು ಸಿಖ್, ತಮಿಳು, ಹಿಂದಿ, ಉರ್ದು, ಬಂಗಾಳಿಗಳ ನಡುವಿನ ಸಂಬಂಧ ಎಂದು ರಾಹುಲ್ ಗಾಂಧಿ ಹೇಳಿದರು. ಪ್ರಧಾನಿಯೊಂದಿಗಿನ ನನ್ನ ಸಮಸ್ಯೆ ಎಂದರೆ ಅವರು ಈ ಸಂಬಂಧಗಳನ್ನು ಮುರಿಯುತ್ತಿದ್ದಾರೆ ಎಂದರು.