Select Your Language

Notifications

webdunia
webdunia
webdunia
webdunia

ಪ್ಯಾರಾ‌ಒಲಿಂಪಿಯನ್ ಪಿಸ್ಟೋರಿಯಲ್‌ಗೆ ಐದು ವರ್ಷಗಳ ಜೈಲು ಶಿಕ್ಷೆ

ಪ್ಯಾರಾ‌ಒಲಿಂಪಿಯನ್ ಪಿಸ್ಟೋರಿಯಲ್‌ಗೆ ಐದು ವರ್ಷಗಳ ಜೈಲು ಶಿಕ್ಷೆ
ದ.ಆಫ್ರಿಕಾ , ಮಂಗಳವಾರ, 21 ಅಕ್ಟೋಬರ್ 2014 (15:11 IST)
ಬ್ಲೇಡ್ ರನ್ನರ್ ಖ್ಯಾತಿಯ ಪಿಸ್ಟೋರಿಯಸ್‌ಗೆ ಪ್ರೇಯಸಿಯ ಕೊಲೆ ಆರೋಪದ ಮೇಲೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಒಲಿಂಪಿಕ್ ಓಟಗಾರನಾಗಿದ್ದ ಪಿಸ್ಟೋರಿಯಸ್ ಪ್ರೇಯಸಿ ರೀವಾ ಕಾಂಪ್‌ಳನ್ನು ಕೊಲೆ ಮಾಡಿದ ಆರೋಪ ಹೊರಿಸಲಾಗಿದೆ.  ಪಿಸ್ಟೋರಿಯಲ್ 2013ರ ಫೆ. 14ರಂದು ರೀವಾಳನ್ನು ಕೊಲೆ ಮಾಡಿದ್ದ. ದ.ಆಫ್ರಿಕಾದ ಪ್ರಿಟೋರಿಯಾ ಕೋರ್ಟ್ ಈ ಶಿಕ್ಷೆಯನ್ನು ಪ್ರಕಟಿಸಿದೆ. 
 
ತನ್ನ ಮನೆಯ ಶೌಚಾಲಯದ ಬಾಗಿಲಿನ ಮೂಲಕ  ಪ್ರೇಯಸಿ ಮೇಲೆ ಅತ್ಯಂತ ನಿರ್ಲಕ್ಷ್ಯವಹಿಸಿ ಅನೇಕ ಬಾರಿ ಗುಂಡು ಹಾರಿಸಿದ್ದಕ್ಕಾಗಿ  ದಕ್ಷಿಣ ಆಫ್ರಿಕಾ ನ್ಯಾಯಾಧೀಶೆ ಈ ಶಿಕ್ಷೆಯನ್ನು ವಿಧಿಸಿದ್ದಾರೆ. ಪ್ರೇಯಸಿ ಸ್ಟೀನ್ ಕ್ಯಾಂಪ್ ಹತ್ಯೆಗೆ ಮುಂಚಿತವಾಗಿ ಕಾನೂನುಬಾಹಿರವಾಗಿ ರೆಸ್ಟೊರೆಂಟ್ ಒಂದರಲ್ಲಿ ಗುಂಡು ಹಾರಿಸಿದ ಆರೋಪದ ಮೇಲೆ 3 ವರ್ಷಗಳ ಜೈಲು ಶಿಕ್ಷೆಯನ್ನು ಕೂಡ ನ್ಯಾಯಾಧೀಶರು ವಿಧಿಸಿದ್ದರು. ಈ ಶಿಕ್ಷೆಯನ್ನು ಅಮಾನತಿನಲ್ಲಿರಿಸಲು ನ್ಯಾಯಾಧೀಶೆ ಆದೇಶಿಸಿದರು. 
 
ಪಿಸ್ಟೋರಿಯಸ್ ಕಳೆದ ವರ್ಷ ಪ್ರೇಮಿಗಳ ದಿನದಂತೆ ಪ್ರಿಯತಮೆ ಸ್ಟೀನ್‌ಕ್ಯಾಂಪ್‌ಳನ್ನು ತನ್ನ ಮನೆಯ ಶೌಚಾಲಯದ ಬಾಗಿಲಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಶೂಟಿಂಗ್ ಆಕಸ್ಮಿಕವೆಂದೂ ರಾತ್ರಿವೇಳೆ ಯಾರೋ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಭಾವಿಸಿ ತಾನು ಗುಂಡುಹಾರಿಸಿದ್ದಾಗಿಯೂ ಪಿಸ್ಟೋರಿಯಸ್  ತಿಳಿಸಿದ್ದ. ನ್ಯಾಯಾಧೀಶೆ ಮಾಸಿಪಾ ಪಿಸ್ಟೋರಿಯಸ್ ವಿರುದ್ಧ ಮಾನವಹತ್ಯೆ ಅಥವಾ ನಿರ್ಲಕ್ಷ್ಯದ ಹತ್ಯೆ ಆರೋಪದ ಮೇಲೆ ಶಿಕ್ಷೆ ವಿಧಿಸಿದ್ದು, ಅವನನ್ನು ನೈಜ ಹತ್ಯೆಯಿಂದ ಖುಲಾಸೆಗೊಳಿಸಿದ್ದಾರೆ. 2012ರ ಸಮ್ಮರ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪಿಸ್ಟೋರಿಯನ್ ಪುರುಷರ 400 ಮೀಟರ್ ಓಟ ಮತ್ತು 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ವಿಜೇತನಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದ.

Share this Story:

Follow Webdunia kannada