Select Your Language

Notifications

webdunia
webdunia
webdunia
webdunia

ಪೆಟ್ರೋಲ್ ದರ ಲೀಟರ್‌ಗೆ 1.82 ರೂ. ಕಡಿತ, ಡೀಸೆಲ್ ದರ 50 ಪೈಸೆ ಏರಿಕೆ

ಪೆಟ್ರೋಲ್ ದರ ಲೀಟರ್‌ಗೆ 1.82 ರೂ. ಕಡಿತ, ಡೀಸೆಲ್ ದರ  50 ಪೈಸೆ ಏರಿಕೆ
ನವದೆಹಲಿ , ಭಾನುವಾರ, 31 ಆಗಸ್ಟ್ 2014 (10:52 IST)
ಪೆಟ್ರೋಲ್ ದರ ಶನಿವಾರ ಲೀಟರ್‌ಗೆ 1.82 ರೂ. ಕಡಿತ ಮಾಡಲಾಗಿದ್ದು, ಈ ತಿಂಗಳು ಪೆಟ್ರೋಲ್ ದರದಲ್ಲಿ ಮೂರನೇ ಕಡಿತವಾಗಿದೆ. ಆದರೆ ಡೀಸೆಲ್ ದರಗಳನ್ನು ಲೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಶನಿವಾರ ಮಧ್ಯರಾತ್ರಿಯಿಂದ ಈ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಕಂಪೆನಿಗಳು ಪ್ರಕಟಿಸಿವೆ.

ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಕುಸಿತ ಉಂಟಾಗಿದ್ದು, ಪೆಟ್ರೋಲ್ ದರ ಲೀಟರ್‌ಗೆ 1.51 ರೂ. ಕಡಿತ ಮಾಡಲಾಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಸೇರಿಸಿದ ನಂತರ ದೆಹಲಿಯಲ್ಲಿ ಲೀಟರ್‌ಗೆ 1.82 ರೂ. ಆಗುತ್ತದೆ. ದೆಹಲಿಯಲ್ಲಿ ಪೆಟ್ರೋಲ್  ದರ ಲೀಟರ್‌ಗೆ 70.33 ರೂ. ಇದ್ದದ್ದು ಭಾನುವಾರದಿಂದ 68. 51 ರೂ. ಆಗಲಿದೆ.

ಡೀಸೆಲ್ ಚಿಲ್ಲರೆ ದರ ವೆಚ್ಚದ ದರಕ್ಕೆ ಸಮಾನವಾಗಿದ್ದರಿಂದ 2013ರ ಜನವರಿ ನಿರ್ಧಾರಕ್ಕೆ ಅನುಗುಣವಾಗಿ ದರಗಳನ್ನು ಲೀಟರ್‌ಗೆ 50 ಪೈಸೆ ಏರಿಸಲಾಗಿದೆ.ಡೀಸೆಲ್ ದರ ಮುಂಚಿನ ಲೀಟರ್‌ಗೆ 58.40 ಇದ್ದಿದ್ದು, 58.97 ರೂ.ಗೆ ಕುಸಿತವಾಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಅವಲಂಬಿಸಿ ನಗರದಿಂದ ನಗರಕ್ಕೆ ಡೀಸೆಲ್ ದರದಲ್ಲಿ ವ್ಯತ್ಯಾಸವಾಗುತ್ತದೆ.  

Share this Story:

Follow Webdunia kannada